ಕರ್ನಾಟಕ

karnataka

ETV Bharat / sports

ಬ್ರಾತ್​ವೇಟ್​ ಕೆಚ್ಚೆದೆ ಬ್ಯಾಟಿಂಗ್​ಗೆ ಕಿವೀಸ್ ಫಿದಾ​​... ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ದೈತ್ಯನಿಗೆ ಅಭಿನಂದನೆ! - ಕೆಚ್ಚೆದೆ ಬ್ಯಾಟಿಂಗ್​

ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​ನ ಕಾರ್ಲೋಸ್​ ಬ್ರಾಥ್​ವೇಟ್​​ ಕೆಚ್ಚೆದೆಯ ಬ್ಯಾಟಿಂಗ್​ ಪ್ರದರ್ಶನ ನೀಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬ್ರಾತ್​ವೇಟ್​ಗೆ ಅಭಿನಂದನೆ

By

Published : Jun 23, 2019, 3:39 AM IST

ಮ್ಯಾಂಚೆಸ್ಟರ್​​:2016ರ ವಿಶ್ವಕಪ್​ ಟಿ20 ಫೈನಲ್​ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ಗೆಲುವಿಗೆ ಬೇಕಾಗಿದ್ದು ಬರೋಬ್ಬರಿ 19ರನ್​​. ಟೂರ್ನಿಯಲ್ಲೇ ಅತಿ ಹೆಚ್ಚು ಮಾರಕ ಬೌಲಿಂಗ್​ ಮಾಡಿದ್ದ ಸ್ಟೋಕ್ಸ್​​ ಕೊನೆ ಓವರ್​ ಮಾಡಲು ಸಜ್ಜಾಗಿದ್ದರು. ಆದರೆ ಆ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ನ ಕಾರ್ಲೋಸ್​​ ಬ್ರಾತ್​ವೇಟ್​​ ಸತತ ನಾಲ್ಕು ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದು ಎಲ್ಲರಿಗೂ ಗೊತ್ತಿದೆ.

ಅದೇ ರೀತಿ ನಿನ್ನೆ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲೂ ಕಾರ್ಲೊಸ್​ ಬ್ರಾತ್​ವೇಟ್​ ಅದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಆದರೆ ಕೊನೆಯ ಓವರ್​​ನಲ್ಲಿ ತಂಡಕ್ಕೆ ಕೇವಲ 5ರನ್​ಗಳ ಅವಶ್ಯಕತೆಯಿದ್ದಾಗ ಸ್ಫೋಟಕ ಹೊಡೆತಕ್ಕೆ ಮುಂದಾಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್​ ನೀಡುವ ಮೂಲಕ ತಂಡವನ್ನ ವಿರೋಚಿತವಾಗಿ ಸೋಲುವಂತೆ ಮಾಡಿದ್ದಾರೆ. ಆದರೆ ಇವರ ಈ ಅಬ್ಬರದ ಬ್ಯಾಟಿಂಗ್​​ ವೈಖರಿಗೆ ಎದುರಾಳಿ ನ್ಯೂಜಿಲೆಂಡ್​ ಫುಲ್​ ಫಿದಾ ಆಗಿದೆ.

40 ಓವರ್​ಗಳಲ್ಲಿ 8ವಿಕೆಟ್​​ನಷ್ಟಕ್ಕೆ 222ರನ್​ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡಕ್ಕೆ ಅಂತಿಮ 10 ಓವರ್​ಗಳಲ್ಲಿ ಬೇಕಾಗಿದ್ದ ಬರೋಬ್ಬರಿ 70ರನ್​. ಆದರೆ ಕೈಯಲ್ಲಿ 2ವಿಕೆಟ್​ ಮಾತ್ರ ಇತ್ತು. ಈ ವೇಳೆ ಕಾರ್ಲೊಸ್​ ಬ್ರಾತ್​ವೇಟ್​ ಧೈರ್ಯ ಕಳೆದುಕೊಳ್ಳದೇ ಬ್ಯಾಟಿಂಗ್​ ಬೀಸಿದರು. ಕೇವಲ 80 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಅವರು 4ನೇ ಓವರ್​​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಹಾಗೂ ಒಂದು ಬೌಂಡರಿ ಸೇರಿ 24ರನ್​ಗಳಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು.

ಕೊನೆಯ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ ಗೆಲುವಿಗೆ ಕೇವಲ 5ರನ್​ಗಳ ಅವಶ್ಯಕತೆಯಿತ್ತು. ಇನ್ನೇನು ತಂಡ ಗೆಲುವಿನ ನಗೆ ಬೀರುವಂತೆ ಮಾಡುತ್ತಾರೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆಯಲ್ಲಿ ಬೌಲ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇದರಿಂದ ತಂಡ ವಿರೋಚಿತ ಸೋಲು ಕಂಡಿತು. ಈ ವೇಳೆ ಕೆಲ ನಿಮಿಷಗಳ ಕಾಲ ಮೌನಕ್ಕೆ ಶರಣಾದ ಬ್ರಾಥ್​ವೇಟ್​, ಮೈದಾನದಲ್ಲಿ ಕಣ್ಣೀರು ಸಹ ಹಾಕಿದರು.ಈ ವೇಳೆ ಮೈದಾನದಲ್ಲಿದ್ದ ನ್ಯೂಜಿಲ್ಯಾಂಡ್​ ಪ್ಲೇಯರ್ಸ್​ ಬ್ರಾಥ್​ವೇಟ್​ಗೆ ಸಮಾಧಾನಪಡಿಸಿ, ಅಭಿನಂದನೆ ಸಲ್ಲಿಕೆ ಮಾಡಿದರು. ಇಷ್ಟೇ ಅಲ್ಲದೇ ಅವರು ಪೆವಿಲಿಯನ್​ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎದುರಾದ ಕಿವೀಸ್​ನ ಪ್ರತಿಯೊಬ್ಬ ಪ್ಲೇಯರ್ಸ್​,ಸಿಬ್ಬಂದಿ ಹಾಗೂ ಕೋಚ್​ ಅವರಿಗೆ ಹಸ್ತಲಾಘವ ಮಾಡಿ, ಕೆಚ್ಚೆದೆಯ ಬ್ಯಾಟಿಂಗ್​ಗೆ ವಿಶ್ ಮಾಡಿದ್ದಾರೆ.

ABOUT THE AUTHOR

...view details