ಚೆನ್ನೈ:ಭಾರತ ಕ್ರಿಕೆಟ್ನ ಆಲ್ರೌಂಡರ್ ವಿಜಯ್ ಶಂಕರ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ಶಂಕರ್ ಹಸೆಮಣೆ ಏರಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿರಿಸಿದ ಆಲ್ರೌಂಡರ್ ವಿಜಯ್ ಶಂಕರ್ - Vijay Shankar Married with Vaishali Visweswaran
ಭಾರತ ಕ್ರಿಕೆಟ್ನ ಆಲ್ರೌಂಡರ್ ವಿಜಯ್ ಶಂಕರ್ ವೈಶಾಲಿ ವಿಶ್ವೇಶ್ವರನ್ ಅವರನ್ನು ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ವಿಜಯ್ ಶಂಕರ್
ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ ಶಂಕರ್ ಅವರಿಗೆ ಸನ್ರೈಸರ್ಸ್ ಹೈದರಾಬಾದ್ ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶುಭ ಕೋರಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ವಿಜಯ್ ಶಂಕರ್ ಅವರ ನಿಶ್ಚಿತಾರ್ಥ ಆಗಿತ್ತು. ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡದ ಪರ ಶಂಕರ್ ಆಡುತ್ತಿದ್ದಾರೆ.
2018ರಲ್ಲಿ ಟಿ-20 ಮೂಲಕ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದ ಶಂಕರ್, 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸದ್ಯ ನಡೆಯುತ್ತಿರುವ ಕ್ರಿಕೆಟ್ ಸರಣಿಗಳಿಗೆ ಭಾರತ ತಂಡದಲ್ಲಿ ಶಂಕರ್ಗೆ ಅವಕಾಶ ದೊರೆತಿಲ್ಲ.