ಲಂಡನ್:ವಿಶ್ವಕಪ್ನಿಂದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಈಗಾಗಲೇ ಹೊರಬಿದ್ದಿದ್ದು, ಇದರ ಮಧ್ಯೆ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ಗಾಯಗೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಟೀಂ ಇಂಡಿಯಾಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ಆದರೆ ಭಯ ಪಡುವ ಅವಶ್ಯಕತೆಯಿಲ್ಲ ಎಂದ ಬುಮ್ರಾ ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಶಂಕರ್ಗೆ ನಾನು ಎಸೆದ ಯಾರ್ಕರ್ ಬಾಲ್ ಬಿದ್ದು ಗಾಯ, ಅವರು ಚೆನ್ನಾಗಿದ್ದಾರೆಂದ ಬುಮ್ರಾ! - ಲಂಡನ್
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಈಗಾಗಲೇ ವಿಶ್ವಕಪ್ನಿಂದ ಹೊರಬಿದ್ದಿದ್ದು, ಮತ್ತೋರ್ವ ಆಟಗಾರ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದಾರೆ. ಇಷ್ಟರ ಮಧ್ಯೆ ಮತ್ತೋರ್ವ ಆಟಗಾರ ಗಾಯಗೊಂಡಿರುವ ವಿಷಯ ಕ್ರೀಡಾಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿತ್ತು.
ಪಾಕ್ ವಿರುದ್ಧದ ಪಂದ್ಯ ಮುಗಿದ ಬಳಿಕ ನೆಟ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ವಿಜಯ್ ಶಂಕರ್ಗೆ ನಾನು ಎಸೆದ ಯಾರ್ಕರ್ ಬಾಲ್ ಬಿದ್ದು, ಬೆರಳಿಗೆ ಗಾಯವಾಗಿತ್ತು. ಅಭ್ಯಾಸ ನಡೆಸುತ್ತಿದ್ದಾಗ ಇಂತಹ ಘಟನೆಗಳು ನಡೆಯುವುದು ಕಾಮನ್. ಆದರೆ ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ವಿಜಯ್ ಶಂಕರ್ ಚೆನ್ನಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶನಿವಾರದಂದು ಟೀಂ ಇಂಡಿಯಾ ಆಫ್ಘಾನಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯದ ವೇಳೆಗೆ ವಿಜಯ್ ಶಂಕರ್ ಸಂಪೂರ್ಣವಾಗಿ ಗುಣಮುಖರಾಗದಿದ್ದರೆ, ರಿಷಭ್ ಪಂತ್ ಅವಕಾಶ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಭುವಿ ಗಾಯಗೊಂಡಿರುವ ಕಾರಣ ಅವರ ಸ್ಥಾನವನ್ನ ಮೊಹಮ್ಮದ್ ಶಮಿ ತುಂಬುವ ಸಾಧ್ಯತೆ ದಟ್ಟವಾಗಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಎರಡು ವಿಕೆಟ್ ಪಡೆದು ಗಮನ ಸೆಳೆದಿದ್ದರು.