ನವದೆಹಲಿ:20 ವರ್ಷಗಳ ಹಿಂದೆ ಭಾರತ ಕ್ರಿಕೆಟ್ನಲ್ಲಿ ನಡೆದಿದ್ದ ಬೃಹತ್ ಫಿಕ್ಸಿಂಗ್ನ ರೂವಾರಿಯಾಗಿದ್ದ ಸಂಜೀವ್ ಚಾವ್ಲಾನನ್ನು ಭಾರತಕ್ಕೆ ಕರೆತರಲಾಗಿದ್ದು, ಜನರೆದುರು ನಡೆಯುವ ಪ್ರತಿಯೊಂದು ಪಂದ್ಯ ಫಿಕ್ಸಿಂಗ್ಗೆ ಒಳಪಟ್ಟಿರುತ್ತದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
2000ನೇ ಇಸವಿಯಲ್ಲಿ ನಡೆದಿದ್ದ ಭಾರತ ಮತ್ತ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮ್ಯಾಚ್ ಫಿಕ್ಸಿಂಗ್ನ ಪ್ರಮುಖ ಆರೋಪಿಯಾಗಿರುವ ಸಂಜೀವ್ ಚಾವ್ಲಾ, ನಮ್ಮೆದುರು ನಡೆಯುವ ಎಲ್ಲಾ ಪಂದ್ಯಗಳು ಫಿಕ್ಸಿಂಗ್ಗೆ ಒಳಗಾಗಿರುತ್ತವೆ ಎಂದು ಹೇಳಿದ್ದಾನೆ. ಇದೊಂದು ಅಂಡರ್ ವರ್ಲ್ಡ್ ಮಾಫಿಯಾ. ಅದರ ನಿಯಂತ್ರಣದಲ್ಲಿ ಕ್ರಿಕೆಟ್ ನಡೆಯುತ್ತದೆ. ಒಬ್ಬ ಸಿನಿಮಾ ನಿರ್ದೇಶಕ ಸಿನಿಮಾ ಹೇಗೆ ನಿರ್ದೇಶಿಸುತ್ತಾನೋ ಹಾಗೆ ಫಿಕ್ಸಿಂಗ್ ಕೂಡ ನಡೆಯುತ್ತದೆ ಎಂದು ಚಾವ್ಲಾ ಹೇಳಿದ್ದಾನೆ.