ಕರ್ನಾಟಕ

karnataka

ETV Bharat / sports

ಸ್ಟೀವ್​ ಸ್ಮಿತ್​ರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಸಿಎ​ ಸದಸ್ಯರಿಂದ ಒಮ್ಮತದ ಅಭಿಪ್ರಾಯವಿಲ್ಲ! - ಬಾಲ್​ ಟ್ಯಾಂಪರಿಂಗ್

ಆಸ್ಟ್ರೇಲಿಯಾ ಮಾಧ್ಯಮಗಳ ಪ್ರಕಾರ, ಮುಂದಿನ ಸಿಎ ಮಂಡಳಿಯ ಚರ್ಚೆಗಳಲ್ಲಿ ಸ್ಟೀವ್​ ಸ್ಮಿತ್​ ಭವಿಷ್ಯದ ಕುರಿತು ಹೆಚ್ಚು ಚರ್ಚೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಆದರೆ, ಕೋಚ್​ ಜಸ್ಟಿನ್ ಲ್ಯಾಂಗರ್​ ಇತ್ತೀಚಿಗೆ ಕ್ಯಾಪ್ಟನ್ಸಿ ಬದಲಾವಣೆ ಕುರಿತು ಮಾತನಾಡುವ ವೇಳೆ, ಆಸ್ಟ್ರೇಲಿಯಾ ತಂಡದಲ್ಲಿ ಸದ್ಯಕ್ಕೆ ನಾಯಕನ ಜಾಗ ಖಾಲಿ ಇಲ್ಲ ಎಂದು ತಿಳಿಸಿದ್ದಾರೆ..

ಸ್ಟೀವ್ ಸ್ಮಿತ್​
ಸ್ಟೀವ್ ಸ್ಮಿತ್​

By

Published : Mar 30, 2021, 9:41 PM IST

ಸಿಡ್ನಿ :ಕ್ರಿಕೆಟ್​ ಆಸ್ಟ್ರೇಲಿಯಾದ ಕೆಲವು ಸದಸ್ಯರು ರಾಷ್ಟ್ರೀಯ ತಂಡದ ನಾಯಕನನ್ನಾಗಿ ಪುನಃ ನೇಮಕ ಮಾಡುವುದರಲ್ಲಿ ಒಮ್ಮತದ ಅಭಿಪ್ರಾಯ ಹೊಂದಿಲ್ಲ ಎಂದು ತಿಳಿದು ಬಂದಿದೆ.

ಸ್ಮಿತ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ವೇಳೆ ಬಾಲ್ ಟ್ಯಾಂಪರಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದು, ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಅಂದಿನಿಂದ ಸೀಮಿತ ಓವರ್​ಗಳ ತಂಡಕ್ಕೆ ಆ್ಯರೋನ್​ ಫಿಂಚ್​ರನ್ನು ಮತ್ತು ಟೆಸ್ಟ್​ ಕ್ರಿಕೆಟ್​ಗೆ ಟೀಮ್ ಪೇನ್​ ಆಸೀಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ, ಇತ್ತೀಚೆಗೆ ಸ್ಮಿತ್ ತಮಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ತಂಡವನ್ನ ಮುನ್ನಡೆಸಲು ಉತ್ಸುಕನಾಗಿದ್ದೇನೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಬಯಸಿದಲ್ಲಿ ನಾನು ಮತ್ತೆ ತಂಡದ ನಾಯಕನ ಹೊಣೆ ಹೊರಲು ಸಿದ್ಧ. ನನಗೆ ಮತ್ತೆ ಅವಕಾಶ ನೀಡಿದರೆ ಉತ್ಸಾಹದಿಂದ ತಂಡ ಮುನ್ನಡೆಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಆಸ್ಟ್ರೇಲಿಯಾ ಮಾಧ್ಯಮಗಳ ಪ್ರಕಾರ, ಮುಂದಿನ ಸಿಎ ಮಂಡಳಿಯ ಚರ್ಚೆಗಳಲ್ಲಿ ಸ್ಟೀವ್​ ಸ್ಮಿತ್​ ಭವಿಷ್ಯದ ಕುರಿತು ಹೆಚ್ಚು ಚರ್ಚೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಆದರೆ, ಕೋಚ್​ ಜಸ್ಟಿನ್ ಲ್ಯಾಂಗರ್​ ಇತ್ತೀಚಿಗೆ ಕ್ಯಾಪ್ಟನ್ಸಿ ಬದಲಾವಣೆ ಕುರಿತು ಮಾತನಾಡುವ ವೇಳೆ, ಆಸ್ಟ್ರೇಲಿಯಾ ತಂಡದಲ್ಲಿ ಸದ್ಯಕ್ಕೆ ನಾಯಕನ ಜಾಗ ಖಾಲಿ ಇಲ್ಲ ಎಂದು ತಿಳಿಸಿದ್ದಾರೆ.

"ನಾವು 3 ಸ್ವರೂಪಗಳಿಗೆ ಇಬ್ಬರು ಅತ್ಯುತ್ತಮ ನಾಯಕರನ್ನು ಹೊಂದಿದ್ದೇವೆ. ಮುಂದೆ ಟಿ20 ವಿಶ್ವಕಪ್​ ಮತ್ತು ಆ್ಯಶಸ್​​ನಂತಹ ಪ್ರಮುಖ ಟೂರ್ನಿಗಳು ಬರುತ್ತಿವೆ. ನಮ್ಮ ಭವಿಷ್ಯ ಉತ್ತಮವಾಗಿ ಕಾಣುತ್ತಿದೆ. ಮಾಧ್ಯಮದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆಯಾದರೂ, ಇಲ್ಲಿ ಯಾವುದೇ ನಾಯಕತ್ವ ಸ್ಥಾನ ಲಭ್ಯವಿಲ್ಲ" ಎಂದು ಲ್ಯಾಂಗರ್​ ಆಸ್ಟ್ರೇಲಿಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ABOUT THE AUTHOR

...view details