ಕರ್ನಾಟಕ

karnataka

ETV Bharat / sports

ಶ್ರೀಲಂಕಾದ ಸ್ಟಾರ್​ ಬೌಲರ್​ಗೆ ಒಂದು ವರ್ಷ ನಿಷೇಧ ಹೇರಿದ ಐಸಿಸಿ - ಐಸಿಸಿ

10 ತಿಂಗಳ ಅವಧಿಯಲ್ಲಿ ಎರಡು ಬಾರಿ ಶಂಕಾಸ್ಪದ ಬೌಲಿಂಗ್​ ಮಾಡಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅಕಿಲ ಧನಂಜಯ್​ ಒಂದು ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡದಂತೆ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

Akila Dananjaya

By

Published : Sep 19, 2019, 8:40 PM IST

ಲಂಡನ್​: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಸಂಶಯಾಸ್ಪದ ಬೌಲಿಂಗ್​ ಮಾಡಿದ ಸಂಬಂಧ ತನಿಖೆಗೆ ಗುರಿಯಾಗಿದ್ದ ಶ್ರೀಲಂಕಾ ಸ್ಪಿನ್ನರ್​ ಅಕಿಲ ಧನಂಜಯ ಅವರಿಗೆ ಐಸಿಸಿ ಒಂದು ವರ್ಷ ನಿಷೇಧವೇರಿದೆ.

10 ತಿಂಗಳ ಅವಧಿಯಲ್ಲಿ ಎರಡು ಬಾರಿ ಶಂಕಾಸ್ಪದ ಬೌಲಿಂಗ್​ ಮಾಡಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಧನಂಜಯ ಒಂದು ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡದಂತೆ ಐಸಿಸಿಯಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

2018ರ ಆಗಸ್ಟ್​ನಲ್ಲಿ ಚೆನ್ನೈನಲ್ಲಿ ಧನಂಜಯ ಬೌಲಿಂಗ್​ ಶೈಲಿ ಹಾಗೂ ಕಳೆದ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ನಲ್ಲಿ ಧನಂಜಯ ಐಸಿಸಿ ನಿಯಮವನ್ನು ಮುರಿದು ಸಂಶಯಾಸ್ಪದ ಬೌಲಿಂಗ್​ ಮಾಡಿ ಸಿಕ್ಕಿಬಿದ್ದ ಹಿನ್ನಲೆ ಅವರ ವಿರುದ್ಧ ಐಸಿಸಿ ಕಠಿಣ ನಿಲುವು ತಳೆದಿದೆ. 12 ತಿಂಗಳ ನಿಷೇಧದ ಅವಧಿ ಮುಗಿದ ನಂತರ ಧನಂಜಯ ಅವರು ತಮ್ಮ ಬೌಲಿಂಗ್​ನ ವಿಮರ್ಶೆಗಾಗಿ ಐಸಿಸಿಯನ್ನು ಸಂಪರ್ಕಿಸಬಹುದಾಗಿದೆ.

ಅಕಿಲ ಧನಂಜಯ

ಧನಂಜಯ ಏಕದಿನ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆದ್ದರಿಂದಲೇ ವಿಶ್ವಕಪ್​ ತಂಡಕ್ಕೂ ಆಯ್ಕೆಯಾಗಿರಲಿಲ್ಲ. ಆದರೆ ಕಿವೀಸ್ ವಿರುದ್ಧದ ಗಾಲೆ ಟೆಸ್ಟ್​​ನಲ್ಲಿ ಕಿವೀಸ್​ ವಿರುದ್ಧ 80 ರನ್​ ನೀಡಿ 5 ವಿಕೆಟ್​ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ20 ಸರಣಿಯಲ್ಲಿ 6 ವಿಕೆಟ್​ ಪಡೆದು ಟೂರ್ನಿಯಲ್ಲಿ ಗರಿಷ್ಠ ವಿಕೆಟ್​​ ಪಡೆದ 2ನೇ ಬೌಲರ್​​ ಎನಿಸಿಕೊಂಡಿದ್ದರು.

ಧನಂಜಯ 6 ಟೆಸ್ಟ್​ ಪಂದ್ಯ, 36 ಎಕದಿನ ಹಾಗೂ 22 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ.

ABOUT THE AUTHOR

...view details