ಲಾಹೋರ್:ಪ್ರಪಂಚದಾದ್ಯಂತ ಕೊರೊನಾ ಹಾವಳಿಗೆ ಭಾರತ, ಚೀನಾ, ಅಮೆರಿಕ, ಇಟಲಿ ಸೇರಿದಂತೆ ಹತ್ತಾರು ರಾಷ್ಟ್ರಗಳು ಸಾವಿರಾರು ಪ್ರಾಣ ಕಳೆದುಕೊಂಡು ಆಘಾತದಲ್ಲಿವೆ. ಈ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬೇಕೆಂದು ಅಖ್ತರ್ ಮನವಿ ಮಾಡಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ ಲೆಜೆಂಡ್ಗಳಾದ ಕಪಿಲ್ದೇವ್ ಭಾರತದ ಬಳಿ ಸಾಕಷ್ಟು ಹಣವಿದೆ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವುದು ಬೇಕಾಗಿಲ್ಲ ಎಂದರೆ, ಸುನಿಲ್ ಗವಾಸ್ಕರ್ ಲಾಹೋರ್ನಲ್ಲಿ ಹಿಮಪಾತವಾಗಬಹುದು, ಆದರೆ ಇಂಡೋ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಅಸಾಧ್ಯ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾರ ಅವರ ಯೂಟ್ಯೂಬ್ ಚಾನೆಲ್ನಲ್ಲಿ ತಮಾಷೆ ಮಾಡಿದ್ದರು.