ಕರ್ನಾಟಕ

karnataka

By

Published : Oct 20, 2019, 10:31 AM IST

ETV Bharat / sports

ಮೂರು ವರ್ಷದ ಬಳಿಕ ರಹಾನೆ ಶತಕ ಸಂಭ್ರಮ!

ಮೊದಲ ದಿನದಾಟದಲ್ಲಿ 83 ರನ್ ಗಳಿಸಿ ದ್ವಿತೀಯ ದಿನಕ್ಕೆ ಆಟ ಕಾಯ್ದುಕೊಂಡಿದ್ದ ರಹಾನೆ ಇಂದು ಮುಂಜಾನೆ ಮೂರಂಕಿ ಗಡಿ ದಾಟಿ ಸಂಭ್ರಮಿಸಿದ್ದಾರೆ.

ಅಜಿಂಕ್ಯ ರಹಾನೆ

ರಾಂಚಿ:ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಮೊದಲ ದಿನದಾಟದಲ್ಲಿ 83 ರನ್ ಗಳಿಸಿ ದ್ವಿತೀಯ ದಿನಕ್ಕೆ ಆಟ ಕಾಯ್ದುಕೊಂಡಿದ್ದ ರಹಾನೆ ಇಂದು ಮುಂಜಾನೆ ಮೂರಂಕಿ ಗಡಿ ದಾಟಿ ಸಂಭ್ರಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅಜಿಂಕ್ಯ ರಹಾನೆ ಹನ್ನೊಂದನೇ ಶತಕ ದಾಖಲಿಸಿದ್ದಾರೆ. ವಿಶೇಷವೆಂದರೆ ಮೂರು ವರ್ಷದ ಬಳಿಕ ಭಾರತದಲ್ಲಿ ಶತಕ ಬಾರಿಸಿದ್ದಾರೆ.

169 ಎಸೆತದಲ್ಲಿ 4 ಸಿಕ್ಸರ್ ಹಾಗೂ 17 ಬೌಂಡರಿ ಮೂಲಕ 100 ರನ್ ಗಳಿಸಿರುವ ರಹಾನೆ, ಟೀಂ ಇಂಡಿಯಾವನ್ನು ಅಲ್ಪ ಕುಸಿತದಿಂದ ಪಾರು ಮಾಡಿದ್ದಾರೆ.

ಅಜಿಂಕ್ಯ ರಹಾನೆ ಬ್ಯಾಟಿಂಗ್

ರೋಹಿತ್ ಜೊತೆಗೂಡಿರುವ ರಹಾನೆ ದ್ವಿಶತಕದ ಜತೆಯಾಟ(235 ರನ್) ನಡೆಸಿದ್ದಾರೆ. 39 ರನ್​​ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರದಲ್ಲಿ ರೋಹಿತ್ ಹಾಗೂ ಈಗ ರಹಾನೆ ಶತಕದಿಂದ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ. ಸದ್ಯ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿದೆ.

ABOUT THE AUTHOR

...view details