ಜೈಪುರ್:ಟೀಂ ಇಂಡಿಯಾ ಟೆಸ್ಟ್ನ ಉಪನಾಯಕ ಅಜಿಂಕ್ಯಾ ರಹಾನೆ, ಏಕದಿನ ಹಾಗೂ ಟಿ-20 ಪಂದ್ಯಗಳಿಂದ ಕಡೆಗಣಿಸಲ್ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಂಡದ ಆಧಾರಸ್ತಂಭವಾಗಿದ್ದ ಈ ಪ್ಲೇಯರ್ನ ಅನೇಕ ತಿಂಗಳಿಂದ ಆಯ್ಕೆ ಸಮಿತಿ ನಿಗದಿತ ಓವರ್ಗಳ ಕ್ರಿಕೆಟ್ನಲ್ಲಿ ಆಡಲು ಅವಕಾಶವೇ ನೀಡಿಲ್ಲ. ಹೀಗಾಗಿ ವಿದೇಶಿ ಕ್ರಿಕೆಟ್ನಲ್ಲಿ ಆಡಲು ರಹಾನೆ ಇದೀಗ ಮುಂದಾಗಿದ್ದಾರೆ.
ವಿಶ್ವಕಪ್ನಲ್ಲಿ ಸಿಗದ ಅವಕಾಶ.. ಕೌಂಟಿ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ಕೇಳಿದ ರಹಾನೆ!
ಇಂಗ್ಲೆಂಡ್ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ನಲ್ಲಿ ಭಾಗಿಯಾಗುವ ಉದ್ದೇಶದಿಂದ ರಹಾನೆ ಬಿಸಿಸಿಐ ಅನುಮತಿ ಕೋರಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ನಲ್ಲಿ ಭಾಗಿಯಾಗುವ ಉದ್ದೇಶದಿಂದ ರಹಾನೆ ಬಿಸಿಸಿಐ ಅನುಮತಿ ಕೋರಿದ್ದಾರೆ. ಟೀಂ ಇಂಡಿಯಾದ ಕ್ಲಾಸ್ ಬ್ಯಾಟ್ಸ್ಮನ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಪ್ಲೇಯರ್ ಈಗಾಗಲೇ ಹ್ಯಾಂಪ್ಶೈರ್ ಕೌಂಟಿ ತಂಡದ ಜೊತೆ ಮಾತುಕತೆ ನಡೆಸಿದ್ದು, ಜುಲೈ ತಿಂಗಳಲ್ಲಿ ಆರಂಭಗೊಳ್ಳಲಿರುವ ಕ್ರಿಕೆಟ್ನಲ್ಲಿ ಭಾಗಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಮುನ್ನಡೆಸುತ್ತಿರುವ ರಹಾನೆ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಬ್ಯಾಟಿಂಗ್ನಲ್ಲಿ ಅನುಭವಿಸುತ್ತಿರುವ ವೈಫಲ್ಯದಿಂದ ಹೊರಬರಲು ಅವರು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜತೆಗೆ ಐಪಿಎಲ್ ಮುಗಿಯುತ್ತಿದ್ದಂತೆ ವಿಶ್ವಕಪ್ ಆರಂಭಗೊಳ್ಳುವುದರಿಂದ ರಹಾನೆ ಈ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ಚೇತೇಶ್ವರ್ ಪೂಜಾರ ಹಾಗೂ ಇಶಾಂತ್ ಶರ್ಮಾ ಕೌಂಟಿ ಕ್ರಿಕೆಟ್ನಲ್ಲಿ ಆಡಿದ್ದಾರೆ.