ಕರ್ನಾಟಕ

karnataka

ETV Bharat / sports

100ನೇ ಪಂದ್ಯವಾಡಿದ ನಾಥನ್ ಲಿಯಾನ್​​ಗೆ ವಿಶೇಷ ಉಡುಗೊರೆ ನೀಡಿದ ರಹಾನೆ! - nathan lyon on his 100th test

ಲಿಯಾನ್ ಆಡಿದ 100ನೇ ಪಂದ್ಯದಲ್ಲಿ ಸೋಲು ಕಂಡಿದ್ದರೂ, ಈ ಕ್ಷಣ ಅವಿಸ್ಮರಣೀಯವಾಗಿಸಲು ಭಾರತದ ಎಲ್ಲ ಆಟಗಾರರು ಸಹಿ ಹಾಕಿರುವ ಟೀಂ ಇಂಡಿಯಾದ ಜೆರ್ಸಿಯನ್ನು ರಹಾನೆ ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದ್ದಾರೆ.

ajinkya rahane presented signature jersey to nathan lyon on his 100th test
100ನೇ ಪಂದ್ಯವಾಡಿದ ನಾಥನ್ ಲಿಯಾನ್​​ಗೆ ವಿಶೇಷ ಉಡುಗೊರೆ ನೀಡಿದ ರಹಾನೆ!

By

Published : Jan 19, 2021, 11:18 PM IST

ಬ್ರಿಸ್ಬೇನ್:ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಆದರೆ, ಸೋತ ಆಸ್ಟ್ರೇಲಿಯಾ ತಂಡದ ಆಟಗಾರನಿಗೆ ಭಾರತ ತಂಡದ ನಾಯಕ ಅಜಿಂಕ್ಯಾ ರಹಾನೆ ವಿಶೇಷ ಉಡುಗೊರೆ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್​​​ಗಳ ರೋಚಕ ಜಯ ಸಾಧಿಸಿದ್ದು, ನಾಲ್ಕು ಪಂದ್ಯಗಳ ಐತಿಹಾಸಿಕ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.

ಬ್ರಿಸ್ಬೇನ್ ಟೆಸ್ಟ್‌ ಮೂಲಕ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 100ನೇ ಟೆಸ್ಟ್ ಪಂದ್ಯ ಆಡಿದರು. ಈ ಪಂದ್ಯದಲ್ಲಿ ಲಿಯಾನ್‌ 3 ವಿಕೆಟ್‌ ಪಡೆದುಕೊಂಡಿದ್ದಾರೆ. ಆಡಿದ 100ನೇ ಪಂದ್ಯ ಸೋತರೂ ಅವಿಸ್ಮರಣೀಯವಾಗಿಸಲು ಭಾರತದ ಎಲ್ಲ ಆಟಗಾರರು ಸಹಿ ಹಾಕಿರುವ ಟೀಂ ಇಂಡಿಯಾದ ಜೆರ್ಸಿಯನ್ನು ರಹಾನೆ ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದ್ದಾರೆ.

ಆಸ್ಟ್ರೇಲಿಯಾದ ಪರ 100 ಟೆಸ್ಟ್‌ ಪಂದ್ಯಗಳನ್ನಾಡಿದ 13ನೇ ಆಟಗಾರ ಎಂಬ ದಾಖಲೆಗೆ ಲಿಯಾನ್ ಪಾತ್ರರಾಗಿದ್ದಾರೆ. ಆದರೆ, 100ನೇ ಪಂದ್ಯದಲ್ಲಿ 400ನೇ ವಿಕೆಟ್ ಮೈಲಿಗಲ್ಲು ಸ್ಥಾಪಿಸುವ ಅವಕಾಶವನ್ನು ಕೊಂಚದರಲ್ಲಿ ತಪ್ಪಿಸಿಕೊಂಡಿರುವ ಲಿಯಾನ್​​, ಈವರೆಗೂ 399 ವಿಕೆಟ್ ಪಡೆದಿದ್ದಾರೆ.

ABOUT THE AUTHOR

...view details