ಮೆಲ್ಬೋರ್ನ್:ಭಾರತ ಟೆಸ್ಟ್ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದ ಅಜಿಂಕ್ಯ ರಹಾನೆ ಆಕರ್ಷಕ ಶತಕ ಸಿಡಿಸಿ ಭಾರತಕ್ಕೆ 8 ವಿಕೆಟ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪ್ರಸಿದ್ಧ ಎಂಸಿಜಿಯ ಸೆಂಚುರಿ ಬೋರ್ಡ್ನಲ್ಲಿ 2ನೇ ಬಾರಿಗೆ ರಾರಾಜಿಸಿದ್ದಾರೆ.
ರಹಾನೆ ಬಾಂಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 112 ರನ್ ಸಿಡಿಸಿ 131 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾಗಿದ್ದರು. ಪಂದ್ಯದ ನಂತರ ರಹಾನೆ ಹೆಸರು ಎಂಸಿಜಿ ಗೌರವ ಫಲಕದಲ್ಲಿ ಶತಕ ಸಿಡಿಸಿದವರ ಪಟ್ಟಿಗೆ ಸೇರಿತು.
ಈ ಹಿಂದೆ 2014ರಲ್ಲಿ ರಹಾನೆ 147 ರನ್ ಸಿಡಿಸುವ ಮೂಲಕ ಮೊದಲ ಬಾರಿಗೆ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರಾಗಿದ್ದರು. ಇದೇ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 169 ರನ್ ಸಿಡಿಸಿ ಈ ಗೌರವಕ್ಕೆ ಪಾತ್ರರಾಗಿದ್ದರು.