ಕೋಲ್ಕತ್ತಾ: ಅಹ್ಮದಾಬಾದ್ನ ಸರ್ದಾರ್ ವಲ್ಲಭಾಯ್ ಪಟೇಲ್ ಕ್ರೀಡಾಂಗಣ ಮುಂದಿನ ವರ್ಷ ಆರಂಭದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಹಗಲು- ರಾತ್ರಿ ಪಂದ್ಯಕ್ಕೆ ಆತಿಥ್ಯ ನೀಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ತಿಳಿಸಿದ್ದಾರೆ.
2021ರ ಜನವರಿಯಿಂದ ಮಾರ್ಚ್ವರೆಗೆ ಇಂಗ್ಲೆಂಡ್ ತಂಡ 5 ಟೆಸ್ಟ್ ಹಾಗೂ ಸೀಮಿತ ಓವರ್ಗಳ ಸರಣಿಯನ್ನಾಡಲಿದೆ.
" ಅಹ್ಮದಾಬಾದ್ ಇಂಗ್ಲೆಂಡ್ ವಿರುದ್ಧ ಡೇ ಅಂಡ್ ನೈಟ್ ಟೆಸ್ಟ್ಗೆ ಆತಿಥ್ಯವಹಿಸಲಿದೆ " ಎಂದು ಕೊಲ್ಕತಾದ ಪ್ಲೆಸ್ ಕ್ಲಬ್‌ನಲ್ಲಿ ಸಿಪಿಐ(ಎಂ)ನ ಶಾಸಕ ಅಶೋಕ್ ಭಟ್ಟಾಚಾರ್ಯ ಅವರ ಪುಸ್ತಕವನ್ನು ಬಿಡುಗಡೆಗೊಳಿಸಿದ ನಂತರ ಸೌರವ್ ಗಂಗೂಲಿ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿರುವುದರಿಂದ ಸಂಪೂರ್ಣ ಟೂರ್ನಮೆಂಟ್ ಯುಎಇಯಲ್ಲಿ ನಡೆಸಬಹುದೆಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಬಿಸಿಸಿಐ ಮಾತ್ರ ದೇಶದಲ್ಲೆ ಬಯೋಬಬಲ್ ನಿರ್ಮಿಸಿ ಇಂಗ್ಲೆಂಡ್ ಸರಣಿಯನ್ನು ನಡೆಸಬೇಕೆಂಬ ಮಹಾತ್ವಾಕಾಂಕ್ಷೆಯನ್ನಿಟ್ಟುಕೊಂಡಿದೆ.
ಅಹ್ಮದಾಬಾದ್, ಧರ್ಮಶಾಲ ಹಾಗೂ ಕೋಲ್ಕತ್ತಾದ ಯಾವುದಾದರೊಂದು ಸ್ಥಳದಲ್ಲಿ ಟೆಸ್ಟ್ ಸರಣಿ ಆಯೋಜಿಸಬಹುದು ಎಂಬ ಮಾಹಿತಿಯಿದೆ. ಆದರೆ ಇದರ ಬಗ್ಗೆ ಇನ್ನು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿಲ್ಲ. ನಮಗೆ ಇನ್ನು 3-4 ತಿಂಗಳ ಕಾಲಾವಾಕಾಶವಿದೆ ಎಂದು ದಾದಾ ತಿಳಿಸಿದ್ದಾರೆ.