ಕರ್ನಾಟಕ

karnataka

ETV Bharat / sports

ಚೆನ್ನೈ ತಂಡದಲ್ಲಿ ಹೆಚ್ಚು ಸೀನಿಯರ್ಸ್​.. ಐಪಿಎಲ್​ನ ಇತರೆ​ ತಂಡಗಳ ಸರಾಸರಿ ವಯಸ್ಸು ಎಷ್ಟು? - Indian Premier League

ಪ್ರಸ್ತುತ ಐಪಿಎಲ್​ನಲ್ಲಿ ತಂಡಗಳ ಸರಾಸರಿ ವಯಸ್ಸನ್ನು ಗಮನಿಸುವುದಾದ್ರೆ ರಾಜಸ್ಥಾನ್​ ರಾಯಲ್ಸ್​ ತಂಡ ಯುವಕರ ಬಳಗವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್​ ಎಂದಿನಂತೆ ಹಿರಿಯರ ತಂಡವಾಗಿಯೇ ಮುಂದುವರಿದಿದೆ..

ಐಪಿಎಲ್​  ತಂಡಗಳ ಸರಾಸರಿ ವಯಸ್ಸು
ಐಪಿಎಲ್​ ತಂಡಗಳ ಸರಾಸರಿ ವಯಸ್ಸು

By

Published : Sep 12, 2020, 9:45 PM IST

ದುಬೈ:ಟಿ20 ಕ್ರಿಕೆಟ್ ಆರಂಭವಾದಾಗ, ಈ ಆಟ ತುಂಬಾ ವೇಗವಾಗಿದೆ. ಇದರಲ್ಲಿ ಕೇವಲ ಯುವ ಆಟಗಾರರು ಮಾತ್ರ ಆಡಬಹುದು ಎಂದು ಭಾವಿಸಲಾಗಿತ್ತು. ಆದರೆ, ಈ ಚುಟುಕು ಕ್ರಿಕೆಟ್​ ವಿಕಾಸಗೊಂಡ ನಂತರ ಇತರೆ ಮಾದರಿಯ ಕ್ರಿಕೆಟ್​ನಂತೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಸಾಬೀತಾಗಿದೆ.

ಇದಕ್ಕೆ ಪೂರಕ ಎಂಬಂತೆ 30+ ಆಟಗಾರರನ್ನೇ ಹೆಚ್ಚು ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಬಾರಿ ಫೈನಲ್​ ಪ್ರವೇಶಿಸಿತು. ಈ ಮೂಲಕ ಕ್ರಿಕೆಟ್​ಗೆ ವಯಸ್ಸು ಮುಖ್ಯವಲ್ಲ ಸಾಮರ್ಥ್ಯವೇ ಪ್ರಧಾನ ಎಂದು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿತ್ತು. ಪ್ರಸ್ತುತ ಐಪಿಎಲ್​ನಲ್ಲಿ ತಂಡಗಳ ಸರಾಸರಿ ವಯಸ್ಸನ್ನು ಗಮನಿಸುವುದಾದ್ರೆ ರಾಜಸ್ಥಾನ್​ ರಾಯಲ್ಸ್​ ತಂಡ ಯುವಕರ ಬಳಗವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್​ ಎಂದಿನಂತೆ ಹಿರಿಯರ ತಂಡವಾಗಿಯೇ ಮುಂದುವರಿದಿದೆ.

ಐಪಿಎಲ್​ನ ಕಿರಿಯರ್ ತಂಡ

ರಾಜಸ್ಥಾನ್​ ರಾಯಲ್ಸ್​: ಸರಾಸರಿ ವಯಸ್ಸು(25.84):ಉದ್ಘಾಟನಾ ಐಪಿಎಲ್​ ಆವೃತ್ತಿಯ ಚಾಂಪಿಯನ್​ ಆಗಿರುವ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಹೆಚ್ಚು ಯುವ ಆಟಗಾರರಿದ್ದಾರೆ. ಈ ತಂಡದ ಸರಾಸರಿ ವಯಸ್ಸು 25.84 ಆಗಿದೆ. ಕರ್ನಾಟಕದ ರಾಬಿನ್ ಉತ್ತಪ್ಪ ತಂಡದ ಅನುಭವಿ ಹಾಗೂ ಹಿರಿಯ ಕ್ರಿಕೆಟಿಗರಾಗಿದ್ರೆ, ಅಂಡರ್​ 19 ವಿಶ್ವಕಪ್​ನಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್​ ಕೂಡ ಇದೇ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್​(26.04) :ಐಪಿಎಲ್​ನಲ್ಲಿ ನಾಲ್ಕು ಆವೃತ್ತಿಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್​ ತಂಡ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡದಲ್ಲಿ 21 ವರ್ಷದ ಅನುಕುಲ್ ರಾಯ್​ ಅತಿ ಕಿರಿಯ ಎನಿಸಿಕೊಂಡಿದ್ದಾರೆ. ತಂಡ ಯುವ ಮತ್ತು ಅನುಭವಿ ಆಟಗಾರರ ಸಮತೋಲನ ಹೊಂದಿದೆ. ಪೊಲಾರ್ಡ್​, ರೋಹಿತ್​ ಹಾಗೂ ಟ್ರೆಂಟ್​ ಬೌಲ್ಟ್​ ಹಿರಿಯ ಸದಸ್ಯರಾಗಿದ್ದಾರೆ.

ಐಪಿಎಲ್​ ತಂಡಗಳ ಸರಾಸರಿ ವಯಸ್ಸು

ಕಿಂಗ್ಸ್​ ಇಲೆವೆನ್ ಪಂಜಾಬ್​ (26.76) :ಒಮ್ಮೆಯೂ ಐಪಿಎಲ್​ ಟ್ರೋಫಿ ಎತ್ತಿಹಿಡಿಯದ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ಸರಾಸರಿ ವಯಸ್ಸು 26.76 ಇದೆ. ಕೆ ಎಲ್​ ರಾಹುಲ್​ ಮುನ್ನಡೆಸುತ್ತಿರುವ ಈ ತಂಡದಲ್ಲೂ 40 ವರ್ಷದ ಕ್ರಿಸ್​ಗೇಲ್​ ಹಿರಿಯ ಆಟಗಾರರಾಗಿದ್ರೆ, 19 ವರ್ಷದ ರವಿ ಬಿಷ್ಣೋಯ್​ ಕಿರಿಯ ಆಟಗಾಗಾರರಾಗಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್​ (26.81) :ಎರಡು ಬಾರಿಯ ಕೆಕೆಆರ್​ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡದಲ್ಲಿ 5 ಆಟಗಾರರು ಮಾತ್ರ 30ರ ಗಟಿದಾಟಿದ್ದಾರೆ. ಕೆಕೆಆರ್​ ತಂಡದ ಸರಾಸರಿ ವಯಸ್ಸು 26.81. ತಂಡದ ನಾಯಕ ದಿನೇಶ್ ಕಾರ್ತಿಕ್​ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. ಕಮಲೇಶ್​ ನಾಗರಕೋಟಿ ತಂಡದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್​ ತಂಡಗಳ ಸರಾಸರಿ ವಯಸ್ಸು

ಡೆಲ್ಲಿಕ್ಯಾಪಿಟಲ್​ (27.04) :ಶ್ರೀಮಂತ ಕ್ರಿಕೆಟ್ ಲೀಗ್​ನಲ್ಲಿ ಒಮ್ಮೆಯೂ ಫೈನಲ್​ ಆಡದ ಏಕೈಕ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್‌ ಈ ವರ್ಷ ಹೆಚ್ಚು ಯುವ ಆಟಗಾರರನ್ನೇ ಒಳಗೊಂಡಿದೆ. ಯುವ ಆಟಗಾರ ಶ್ರೇಯಸ್​ ಅಯ್ಯರ್ ಮುನ್ನಡೆಸಲಿರುವ ತಂಡದಲ್ಲಿ 37 ವರ್ಷದ ಅಮಿತ್ ಮಿಶ್ರಾ ಹಿರಿಯ ಕ್ರಿಕೆಟಿಗನಾದ್ರೆ 20 ವರ್ಷದ ಪೃಥ್ವಿ ಶಾ ಡೆಲ್ಲಿ ತಂಡದ ಕಿರಿಯ ಆಟಗಾರನಾಗಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ (27.24) :2016ರ ಐಪಿಎಲ್​ ಚಾಂಪಿಯನ್ ಆಗಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಆಟಗಾರರ ಸರಾಸರಿ ವಯಸ್ಸು 27.04. ಡೇವಿಡ್​ ವಾರ್ನರ್​ ಮುನ್ನಡೆಸುವ ತಂಡದಲ್ಲಿ ಆಫ್ಘಾನಿಸ್ತಾನದ ಮೊಹ್ಮದ್​ ನಬಿ(35) ಹಾಗೂ ಡೇವಿಡ್​ ವಾರ್ನರ್​(33) ಹಿರಿಯರಾಗಿದ್ದಾರೆ. ಅಂಡರ್​-19 ಕ್ಯಾಪ್ಟನ್​ ಪ್ರಿಯಂ ಗರ್ಗ್, ಅಬ್ದುಲ್​ ಸಮದ್(18) ತಂಡದ ಕಿರಿಯ ಆಟಗಾರರಾಗಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (29.28) :ಐಪಿಎಲ್​ನ ಅತಿ ಹೆಚ್ಚು ಚರ್ಚಿಸಲ್ಪಡುವ ತಂಡವಾಗಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಲಿಸ್ಟ್​ನಲ್ಲಿ 7ನೇ ಸ್ಥಾನದಲ್ಲಿದೆ. ಈ ತಂಡದ ಸರಾಸರಿ ವಯಸ್ಸು 29.28 ಇದೆ. ದಕ್ಷಿಣ ಆಫ್ರಿಕಾದ ಬೌಲರ್​ ಡೇಲ್​ ಸ್ಟೈನ್ ತಂಡದ ಹಿರಿಯನಾದ್ರೆ, ಕರ್ನಾಟಕದ ದೇವದತ್​ ಪಡಿಕ್ಕಲ್​ ತಂಡದ ಕಿರಿಯ ಕ್ರಿಕೆಟಿಗನಾಗಿದ್ದಾರೆ.

ಐಪಿಎಲ್​ನ ಹಿರಿಯ ತಂಡ

ಚೆನ್ನೈ ಸೂಪರ್​ ಕಿಂಗ್ಸ್​ (30.50) :ಹಿಂದಿನ ಎರಡು ಲೀಗ್​ಗಳಂತೆ ಈ ಬಾರಿಯೂ ಚೆನ್ನೈ ಸೂಪರ್​ ಕಿಂಗ್ಸ್​ ಹಿರಿಯ ಆಟಗಾರರನ್ನೇ ಒಳಗೊಂಡಿದೆ. ವಯಸ್ಸಿಗಿಂತ ಅನುಭವಕ್ಕೆ ಹೆಚ್ಚು ಮಹತ್ವ ನೀಡುವ ಪ್ರಾಂಚೈಸಿಯಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್​ ಅತ್ಯಂತ ಹಿರಿಯ ಎನಿಸಿಕೊಂಡಿದ್ದಾರೆ, ತಂಡದಲ್ಲಿರುವ 24 ಆಟಗಾರರಿಲ್ಲಿ 13 ಆಟಗಾರರು 30 ವಯೋಮಾನ ದಾಟಿದ್ದಾರೆ. ಇಂಗ್ಲೆಂಡ್​ ಆಲ್​ರೌಂಡರ್​ ಸ್ಯಾಮ್​ ಕರ್ರನ್​ ತಂಡದ ಕಿರಿಯ ಆಟಗಾರನಾಗಿದ್ದಾರೆ.

ABOUT THE AUTHOR

...view details