ಕರ್ನಾಟಕ

karnataka

ETV Bharat / sports

85ರ ವಯಸ್ಸಿನಲ್ಲಿ 60 ವರ್ಷಗಳ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿರುವ ಹಿರಿಯ ಕ್ರಿಕೆಟಿಗ - ಇಂಗ್ಲೆಂಡ್​

ವೆಸ್ಟ್​ ಇಂಡೀಸ್​ನ ವೇಗದ ಬೌಲರ್​ ತಮ್ಮ ಸಿಸಿಲ್​ ರೈಟ್​ ತಮ್ಮ 85 ನೇ ವಯಸ್ಸಿನಲ್ಲಿ 60 ವರ್ಷಗಳ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.

Cecil Wright

By

Published : Aug 28, 2019, 3:00 PM IST

ಲಂಡನ್​: ವೆಸ್ಟ್​ ಇಂಡೀಸ್​ನ ವೇಗದ ಬೌಲರ್​ ತಮ್ಮ ಸಿಸಿಲ್​ ರೈಟ್​ ತಮ್ಮ 85 ನೇ ವಯಸ್ಸಿನಲ್ಲಿ 60 ವರ್ಷಗಳ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.

ಸಿಸ್​ ರೈಟ್​ ವೆಸ್ಟ್​ ಇಂಡೀಸ್​ನವರಾದರೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲವಾದ್ದರಿಂದ ಅವರು ಚಿರಪರಿಚಿತರಲ್ಲ. 60 ದಶಕದಲ್ಲಿ ಜಮೈಕ ತಂಡದಲ್ಲಿ ಆಡಿದ್ದ ಅವರು ನಂತರ 1959 ರಲ್ಲಿ ಇಂಗ್ಲೆಂಡ್​​ಗೆ​ ವಲಸೆ ಹೋಗಿ ಅಲ್ಲಿನ ಸೆಂಟ್ರಲ್​ ಲ್ಯಾಂಕಾಶೈರ್​ ಲೀಗ್​ನಲ್ಲಿ ಕ್ರಾಂಪ್ಟನ್​ ಪರ ಆಡುತ್ತಿದ್ದರು.

ರೈಟ್​ ತಮ್ಮ 60 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಸುಮಾರು 7000 ವಿಕೆಟ್​ ಪಡೆದಿದ್ದಾರಂತೆ. ರೈಟ್​ 1977ರ ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ 49 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು ಎಂಬ ಮಾಹಿತಿಯೂ ಇದೆ. ಅವರ ಪ್ರಕಾರ 60 ವರ್ಷಗಳ ಕ್ರಿಕೆಟ್​ ಕರಿಯರ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರಂತೆ!.

'ಇಷ್ಟು ವರ್ಷ ಕ್ರಿಕೆಟ್​ ಆಡುವುದಕ್ಕೆ ಹೇಗೆ ಫಿಟ್​ನೆಸ್​ ಕಾಪಾಡಿಕೊಂಡಿದ್ದೇನೆ ಎಂಬ ಬಗ್ಗೆ ಯಾರಿಗೂ ಹೇಳುವುದಿಲ್ಲ. ಆದರೆ ನಾನು ಡಯಟ್​ ಏನೂ ಮಾಡುವುದಿಲ್ಲ, ನನಗೇನು ಬೇಕೋ ಅದನ್ನೆಲ್ಲಾ ತಿನ್ನುತ್ತೇನೆ. ಹೆಚ್ಚು ಮದ್ಯಪಾನ ಮಾಡುವುದಿಲ್ಲ, ಸ್ವಲ್ಪ ಬಿಯರ್​ ಕುಡಿಯುತ್ತೇನೆ ಅಷ್ಟೇ' ಎಂದು ಡೈಲಿ ಮಿರರ್​ ನಡೆಸಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟ್​ ಮೇಲಿನ ಅಘಾದ ಪ್ರೇಮದಿಂದ 60 ವರ್ಷಗಳ ಕಾಲ ನಿವೃತ್ತಿ ಘೋಷಿಸದಿದ್ದ ಅವರು ಸೆಪ್ಟಂಬರ್​​ 7 ರಂದು ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಲಿದ್ದಾರೆ.

ABOUT THE AUTHOR

...view details