ಕರ್ನಾಟಕ

karnataka

ETV Bharat / sports

ಅಗರ್​ಗೆ​ 6 ವಿಕೆಟ್​: ಕಿವೀಸ್​ ಮಣಿಸಿ ಸರಣಿ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡ ಆಸೀಸ್​ - cricket australia

209 ರನ್​ಗಳ ಗುರಿ ಬೆನ್ನತ್ತಿದ ಅತಿಥೇಯ ನ್ಯೂಜಿಲ್ಯಾಂಡ್​ ತಂಡ 17.1 ಓವರ್​ಗಳಲ್ಲಿ 144 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳ ಸೋಲು ಕಂಡಿತು. ಮಾರ್ಟಿನ್ ಗಪ್ಟಿಲ್ 43 ಮತ್ತು ಕಾನ್ವೆ 38 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಆಸ್ಟ್ರೇಲಿಯಾ vs ನ್ಯೂಜಿಲ್ಯಾಂಡ್​
ಆಸ್ಟ್ರೇಲಿಯಾ vs ನ್ಯೂಜಿಲ್ಯಾಂಡ್​

By

Published : Mar 3, 2021, 6:09 PM IST

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್ ವಿರುದ್ಧ 3ನೇ ಟಿ20 ಪಂದ್ಯವನ್ನು 64 ರನ್​ಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯಾ ತಂಡ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

5 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ತಂಡ ಕ್ರಮವಾಗಿ 53 ಮತ್ತು 4 ರನ್​ಗಳಿಂದ ಜಯ ಸಾಧಿಸಿತ್ತು. ಇಂದು 3ನೇ ಪಂದ್ಯದಲ್ಲಿ ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡ್ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತು.

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್​(69), ಗ್ಲೇನ್ ಮ್ಯಾಕ್ಸ್​ವೆಲ್​(71) ಅರ್ಧಶತಕ ಮತ್ತು ಫಿಲಿಪ್ಪೆ ಅವರ 43 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್​ಗಳ ಬೃಹತ್ ಮೊತ್ತ ಕಲೆಹಾಕಿತ್ತು.

209 ರನ್​ಗಳ ಗುರಿ ಬೆನ್ನತ್ತಿದ ಅತಿಥೇಯ ನ್ಯೂಜಿಲ್ಯಾಂಡ್​ ತಂಡ 17.1 ಓವರ್​ಗಳಲ್ಲಿ 144 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳ ಸೋಲು ಕಂಡಿತು. ಮಾರ್ಟಿನ್ ಗಪ್ಟಿಲ್ 43 ಮತ್ತು ಕಾನ್ವೆ 38 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಆಸ್ಟ್ರೇಲಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆಶ್ಟನ್ ಅಗರ್​ 30 ರನ್​ ನೀಡಿ 6 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಇಂದೇ ಪಾದಾರ್ಪಣೆ ಮಾಡಿದ ಮೆರೆಡಿತ್ 2 ವಿಕೆಟ್ ಪಡೆದರೆ, ಜಂಪಾ ಮತ್ತು ಕೇನ್ ರಿಚರ್ಡ್ಸನ್​ ತಲಾ ಒಂದು ವಿಕೆಟ್ ಪಡೆದರು.

ಮಾರ್ಚ್​ 5ರಂದು 4 ಮತ್ತು ಮಾರ್ಚ್​ 7ರಂದು 5ನೇ ಟಿ20 ಪಂದ್ಯ ನಡೆಯಲಿದೆ.

ಇದನ್ನು ಓದಿ:ಒಂದೇ ಓವರ್‌ನಲ್ಲಿ 28 ರನ್‌! ಕಿವೀಸ್‌ ವಿರುದ್ಧ ಮ್ಯಾಕ್ಸ್‌ವೆಲ್‌ ಆರ್ಭಟ; ಮುರಿದೇ ಹೋಯ್ತು ಸ್ಟ್ಯಾಂಡ್‌ ಆಸನ

ABOUT THE AUTHOR

...view details