ಕರ್ನಾಟಕ

karnataka

ETV Bharat / sports

ಸಚಿನ್​ ಬೆನ್ನಲ್ಲೇ ರೋಡ್​ ಸೇಫ್ಟಿ ಟೂರ್ನಿಯಲ್ಲಿ ಭಾಗವಹಿಸಿದ್ದ ಪಠಾಣ್​ಗೂ ಕೊರೊನಾ ದೃಢ.. - ಭಾರತ ಲೆಜೆಂಡ್ಸ್​

ಭಾರತ ತಂದಡ ದಿಗ್ಗಜ ಸಚಿನ್ ತೆಂಡೂಲ್ಕರ್​ ಅವರಿಗೆ ಇಂದು ಬೆಳಗ್ಗೆ ಕೊರೊನಾ ತಗುಲಿರುವುದು ವರದಿಯಾಗಿತ್ತು. ಇದೀಗ ಅವರ ಜೊತೆಯಲ್ಲಿ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ನಲ್ಲಿ ಆಡಿದ್ದ ಯುಸುಫ್ ಪಠಾಣ್​ಗೂ ಕೂಡ ಸಾಂಕ್ರಾಮಿಕ ವೈರಸ್​ ತಗುಲಿದೆ..

ಯೂಸುಫ್ ಪಠಾಣ್​ಗೆ ಕೊರೊನಾ ದೃಢ
ಯೂಸುಫ್ ಪಠಾಣ್​ಗೆ ಕೊರೊನಾ ದೃಢ

By

Published : Mar 27, 2021, 10:03 PM IST

ಮುಂಬೈ :ಭಾರತದ ಮಾಜಿ ಆಲ್​ರೌಂಡರ್​ ಹಾಗೂ 2ನೇ ವಿಶ್ವಕಪ್​ ಗೆದ್ದ ತಂಡದ ಸದಸ್ಯ ಯೂಸುಫ್​ ಪಠಾಣ್​ ಅವರಿಗೂ ಕೋವಿಡ್-19 ದೃಢಪಟ್ಟಿದೆ.

ಭಾರತ ತಂದಡ ದಿಗ್ಗಜ ಸಚಿನ್ ತೆಂಡೂಲ್ಕರ್​ ಅವರಿಗೆ ಇಂದು ಬೆಳಗ್ಗೆ ಕೋವಿಡ್​ 19 ಪಾಸಿಟಿವ್ ಇರುವುದು ಬೆಳಕಿಗೆ ಬಂದಿತ್ತು. ಇದೀಗ ಅವರ ಜೊತೆಯಲ್ಲಿ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ನಲ್ಲಿ ಆಡಿದ್ದ ಯುಸುಫ್ ಪಠಾಣ್​ಗೂ ಕೂಡ ಸಾಂಕ್ರಾಮಿಕ ವೈರಸ್​ ತಗುಲಿದೆ.

ಯೂಸುಫ್ ಪಠಾಣ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ."ಕೆಲ ಸಣ್ಣಪುಟ್ಟ ಲಕ್ಷಣಗಳಿದ್ದು, ನನಗೆ ಇಂದು ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ನಂತರ ನಾನು ಮನೆಯಲ್ಲಿ ಕ್ವಾರಂಟೈನ್​ಗೊಳಗಾಗಿದ್ದೇನೆ ಮತ್ತು ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನಚ್ಚೆರಿಕೆ ಕ್ರಮ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಯೂಸುಫ್ ಪಠಾಣ್ ಮತ್ತು ಸಚಿನ್ ತೆಂಡೂಲ್ಕರ್

ಜೊತೆಗೆ ತಮ್ಮ ಜೊತೆಗೆ ಇತ್ತೀಚೆಗೆ ಸಂಪರ್ಕದಲ್ಲಿದ್ದವರು ಆದಷ್ಟು ಬೇಗ ತಾವಾಗಿಯೇ ಕೋವಿಡ್​-19 ಪರೀಕ್ಷೆಗೊಳಗಾಗಬೇಕೆಂದು ಮನವಿ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಯೂಸುಫ್ ಪಠಾಣ್​ ಚೊಚ್ಚಲ ರೋಡ್ ಸೇಫ್ಟಿ ಸಿರೀಸ್​ ಗೆದ್ದ ಭಾರತ ಲೆಜೆಂಡ್ಸ್ ತಂಡದ ಭಾಗವಾಗಿದ್ದರು.

ಇದನ್ನು ಓದಿ:ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ ಕೊರೊನಾ ಸೋಂಕು ದೃಢ

ABOUT THE AUTHOR

...view details