ಕರ್ನಾಟಕ

karnataka

ETV Bharat / sports

59 ಎಸೆತಗಳಲ್ಲಿ ಕಾನ್ವೆ 99 ರನ್​: 'ಜಸ್ಟ್​ 4ಡೇ ಲೇಟ್​' ಆಯ್ತು ಎಂದು ಅಶ್ವಿನ್​ ಟ್ವೀಟ್​... ಕಾರಣ!? - ಟಿವೋನ್​ ಕಾನ್ವೆ ಭರ್ಜರಿ ಬ್ಯಾಟಿಂಗ್​

ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್ ಆಗಿದ್ದ ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್​​ ಟಿವೋನ್​ ಕಾನ್ವೆ ಆಸ್ಟ್ರೇಲಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ 59 ಎಸೆತಗಳಲ್ಲಿ ಅಜೇಯ 99ರನ್​ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

Devon Conway
Devon Conway

By

Published : Feb 22, 2021, 5:51 PM IST

ಹೈದರಾಬಾದ್​:ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್​ ಟಿವೋನ್ ಕಾನ್ವೆ ಕೇವಲ 59 ಎಸೆತಗಳಲ್ಲಿ ಅಜೇಯ 99ರನ್​ಗಳಿಕೆ ಮಾಡಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇವರ ಆಟಕ್ಕೆ ಫಿದಾ ಆಗಿರುವ ಟೀಂ ಇಂಡಿಯಾ ಆಲ್​ರೌಂಡರ್​ ಆರ್​.ಅಶ್ವಿನ್ ಟ್ವೀಟ್ ಮಾಡಿದ್ದು, Devon Conway is just 4 days late, but what a knock ಎಂದು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. 29 ವರ್ಷದ ನ್ಯೂಜಿಲ್ಯಾಂಡ್​​ ಕಾನ್ವೆ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಐಪಿಎಲ್​​ನಲ್ಲಿ ಅನ್​ಸೋಲ್ಡ್​​ ಆಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಅಶ್ವಿನ್ ಇದೀಗ ಅವರ ಕಾಲೆಳೆದಿದ್ದಾರೆ.

ಓದಿ: ಮಿಂಚಿದ ಸೋಧಿ, ಕಾನ್ವೆ: ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಆಸ್ಟ್ರೇಲಿಯಾಗೆ ಹೀನಾಯ ಸೋಲು

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಗಫ್ಟಿಲ್​(0),ಸೀಪರ್ಟ್​(1) ವಿಕೆಟ್ ಕಳೆದುಕೊಳ್ತು. ಇದರ ಬೆನ್ನಲ್ಲೇ ಕ್ಯಾಪ್ಟನ್​ ವಿಲಿಯಮ್ಸನ್​​(12)ರನ್​ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ವೇಳೆ ಮೈದಾನಕ್ಕಿಳಿದ ಕಾನ್ವೆ ಕೇವಲ 59 ಎಸೆತಗಳಲ್ಲಿ 99ರನ್​ಗಳಿಕೆ ಮಾಡಿದ್ರು. ಇದರಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿಕೊಂಡಿದ್ದವು.

ಇವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿಶಹಬ್ಬಾಸ್​ಗಿರಿ ನೀಡಿರುವ ಅಶ್ವಿನ್​, ಜಸ್ಟ್​​ 4ಡೇ ಲೇಟ್​ ಆಯ್ತು ಎಂದು ಟ್ವೀಟ್ ಮಾಡಿದ್ದಾರೆ.ಅಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಭರ್ಜರಿ ಗೆಲುವು ದಾಖಲು ಮಾಡಿ, 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ABOUT THE AUTHOR

...view details