ಕರ್ನಾಟಕ

karnataka

ETV Bharat / sports

ಅಫ್ರಿದಿ ವಯಸ್ಸು 41ಅಥವಾ 44?.. ಬರ್ತಡೇ ದಿನ ಅಭಿಮಾನಿಗಳಿಗೆ ಗೊಂದಲ ಮೂಡಿಸಿದ ಪಾಕ್​ ಕ್ರಿಕೆಟಿಗ - ಪಾಕಿಸ್ತಾನ ಕ್ರಿಕೆಟ್ ಬೋರ್ಡ್​

ಐಸಿಸಿಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಅವರ ವಯಸ್ಸು ಇಂದಿಗೆ 41. ಆದರೆ, ಅಫ್ರಿದಿ ಟ್ವೀಟ್ ಪ್ರಕಾರ 44 . ಹಾಗಾಗಿ ಅಫ್ರಿದಿ ವಯಸ್ಸು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಶಾಹೀದ್ ಅಫ್ರಿದಿ ಜನ್ಮದಿನ
ಶಾಹೀದ್ ಅಫ್ರಿದಿ ಜನ್ಮದಿನ

By

Published : Mar 1, 2021, 6:51 PM IST

ನವದೆಹಲಿ:ಪಾಕಿಸ್ತಾನ ಮಾಜಿ ಆಲ್​ರೌಂಡರ್ ಶಾಹೀದ್ ಅಫ್ರಿದಿ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ದಿನ ಶುಭ ಕೋರಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ತಾವೂ 44ನೇ ವಸಂತಕ್ಕೆ ಕಾಲಿಟ್ಟಿರುವುದಾಗಿ ಹೇಳುವ ಮೂಲಕ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಐಸಿಸಿಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಅವರ ವಯಸ್ಸು ಇಂದಿಗೆ 41. ಆದರೆ, ಅಫ್ರಿದಿ ಟ್ವೀಟ್ ಪ್ರಕಾರ 44, ಹಾಗಾಗಿ ಅಫ್ರಿದಿ ವಯಸ್ಸು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಈ ದಿನ ನನ್ನ 44ನೇ ಜನ್ಮದಿನವಾಗಿದ್ದು, ನಿಮ್ಮೆಲ್ಲರ ಸುಂದರವಾದ ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದ. ಮುಲ್ತಾನ್​ ತಂಡದೊಂದಿಗೆ ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ಮುಲ್ತಾನ್​ ತಂಡದ ಅಭಿಮಾನಿಗಳಿಗಾಗಿ ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ತೋರುವ ಗುರಿ ಹೊಂದಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನ ಪ್ರಕಾರ ಅಫ್ರಿದಿ ಮಾರ್ಚ್​ 1, 1980ರಲ್ಲಿ ಜನಿಸಿದ್ದಾರೆ ಎಂದಿದ್ದು, ಅವರು ವಯಸ್ಸು ಇಂದಿಗೆ 41 ಆಗಿದೆ. ಆದರೆ, ಅಫ್ರಿದಿ ತಮ್ಮ ವಯಸ್ಸಿನ ಬಗ್ಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿ ತಾವೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ತಮ್ಮ ವಯಸ್ಸು 16ರಲ್ಲಿ 19 ಆಗಿತ್ತು ಎಂದು ಹೇಳುವ ಮೂಲಕ ಕ್ರೀಡಾಭಿಮಾನಿಗಳಿಗೆ ಶಾಕ್ ನೀಡಿದ್ದರು.

ನಾನು ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದಾಗ ನನ್ನ ವಯಸ್ಸು 19 , 16 ಅಲ್ಲ, ಅಧಿಕಾರಿಗಳು ನನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದರು ಎಂದು ತಮ್ಮ ಆಟೋಬಯೋಗ್ರಫಿ ಗೇಮ್ ಚೇಂಜರ್​​ನಲ್ಲಿ ಬರೆದುಕೊಂಡಿದ್ದರು.

ಇದನ್ನು ಓದಿ: ಕೊಹ್ಲಿಯಿಂದ ಕ್ರಿಕೆಟ್​ನಲ್ಲಿ ಯಶಸ್ಸು ಸಾಧಿಸುವ ಗುಣ ಕಲಿಯಲು ಎದುರು ನೋಡುತ್ತಿದ್ದೇನೆ: ಮ್ಯಾಕ್ಸ್​ವೆಲ್​

ABOUT THE AUTHOR

...view details