ಢಾಕಾ: ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 25 ರನ್‌ಗಳಿಂದ ಮಣಿಸುವ ಮೂಲಕ ಅಫ್ಘಾನಿಸ್ತಾನ ತಂಡ ಟಿ-20 ಕ್ರಿಕೆಟ್ನಲ್ಲಿ ಸತತ 12ನೇ ಗೆಲುವು ಸಾಧಿಸಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ 3ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಆಫ್ಘಾನ್ 25 ರನ್‌ಗಳಿಂದ ಮಣಿಸುವ ಮೂಲಕ ಈ ಹಿಂದೆ ಚುಟುಕು ಕ್ರಿಕೆಟ್ನಲ್ಲಿ ಸತತ 11 ಜಯ ಗಳಿಸಿದ್ದ ತನ್ನದೇ ದಾಖಲೆಯನ್ನು ಮುರಿದು ಸತತ 12 ನೇ ಗೆಲುವು ದಾಖಲಿಸಿ ವಿಶ್ವ ದಾಖಲೆ ಬರೆದಿದೆ.