ನವದೆಹಲಿ: ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತಾರಕೈ ಬೀಕರ ಕಾರು ಅಪಘಾತಕ್ಕೆ ಒಳಗಾಗಿದ್ದು, ಕಳೆದ 22 ಗಂಟೆಗಳಿಂದಲೂ ಕೋಮದಲ್ಲಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯಮಾಜಿ ಮಾಧ್ಯಮ ವ್ಯವಸ್ಥಾಪಕ ಎಂ.ಇಬ್ರಾಹಿಂ ಮೊಮಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜಲಾಲಾಬಾದ್ ನಗರದಲ್ಲಿ 29 ವರ್ಷದ ಕ್ರಿಕೆಟಿಗನಿಗೆ ಅಪಘಾತ ಸಂಭವಿಸಿದೆ. ನಜೀಬ್ಗೆ ಕಾರು ಡಿಕ್ಕಿ ಹೊಡೆದಿದ್ದು ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕಳೆದ22 ಗಂಟೆಗಳಿಂದಲೂ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ.
" ಮಾರಣಾಂತಿಕ ಅಪಘಾತ ಸಂಭವಿಸಿ 22 ಗಂಟೆಗಳಾದರೂ ರಾಷ್ಟ್ರೀಯ ಕ್ರಿಕೆಟಿಗ ನಜೀಬ್ ತಾರಕೈಗೆ ಇನ್ನು ಕದಲುತ್ತಿಲ್ಲ. ತಲೆಗೆ ಗಾಯವಾಗಿರುವುದರಿಂದ ಅವರು ಈಗಲೂ ಕೋಮದಲ್ಲಿದ್ದಾರೆ. ಅವರಿಗೆ ಜಲಾಲಾಬಾದ್ ನಗರದಲ್ಲಿ ಕಾರು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅವರನ್ನು ಕಾಬೂಲ್ ಅಥವಾ ನೆರೆಯ ರಾಷ್ಟ್ರಗಳ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅಭಿಮಾನಿಗಳು ಎಸಿಬಿ ಅಧಿಕಾರಿಗಳನ್ನು ಕೇಳಿಕೊಳ್ಳುತ್ತಿದ್ದಾರೆ " ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಾರಕೈ ಅಫ್ಘಾನಿಸ್ತಾನ ತಂಡದ ಪರ ಕೇವಲ ಒಂದು ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದಾರೆ.