ಕಾರ್ಡಿಫ್:ವಿಶ್ವಕಪ್ನ 7ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ಗುಲ್ಬುದ್ದೀನ್ ನೈಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡನೇ ವಿಶ್ವಕಪ್ನಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ತಂಡ 1996ರ ವಿಶ್ವ ಚಾಂಪಿಯನ್ ವಿರುದ್ಧ ಕಣಕ್ಕಿಳಿಯುತ್ತಿದೆ. ವಿಶ್ವಕಪ್ಗೆ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿ ವಿಂಡೀಸ್ನಂತಹ ದೊಡ್ಡ ತಂಡವನ್ನು ಮಣಿಸಿ ಟೂರ್ನಿಯಲ್ಲಿ 9ನೇ ತಂಡವಾಗಿ ಭಾಗವಹಿಸಿರುವ ಅಫ್ಘನ್ ಆಟಗಾರರು, ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೂ ಕೆಚ್ಚೆದೆಯ ಹೋರಾಟ ನಡೆಸಿದ್ದರು. ಇಂದು ಟಾಸ್ ಗೆದ್ದ ತಕ್ಷಣ ನೈಬ್ ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.
ಶ್ರೀಲಂಕಾ ಕೇವಲ ಅರೆಕಾಲಿಕ ಸ್ಪಿನ್ನರ್ ಜೊತೆಗೆ ಐವರು ವೇಗಿಗಳೊಡನೆ ಕಣಕ್ಕಿಳಿದಿರುವುದು ಆಶ್ಚರ್ಯ ತಂದಿದೆ. ಸ್ಪಿನ್ ಮತ್ತು ವೇಗದ ಬೌಲಿಂಗ್ ಹೋರಾಟದಲ್ಲಿ ವಿಜಯಲಕ್ಷ್ಮಿ ಯಾರಾ ಪಾಲಾಗಲಿದ್ದಾಳೆ ಅನ್ನೋದನ್ನು ಕಾದು ನೋಡಬೇಕಿದೆ.