ಲೀಡ್ಸ್:ವಿಶ್ವಕಪ್ನಲ್ಲಿ ನಿನ್ನೆ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಉಭಯ ದೇಶದ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಬಲೂಚಿಸ್ತಾನ ವಿಷಯಕ್ಕೆ ಫೈಟ್... ಪಾಕ್-ಅಫ್ಘಾನ್ ಪಂದ್ಯದ ವೇಳೆ ಹೊಡೆದಾಡಿಕೊಂಡ ಫ್ಯಾನ್ಸ್! - ಹೊಡೆದಾಟ
ವಿಶ್ವಕಪ್ನಲ್ಲಿ ನಿನ್ನೆ ಪಾಕಿಸ್ತಾನ-ಅಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸಿದ್ದ ವೇಳೆ ಹೊರಗಡೆ ಉಭಯ ದೇಶದ ಕ್ರೀಡಾಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಪಂದ್ಯ ನಡೆಯುವುದಕ್ಕೂ ಮುಂಚಿತವಾಗಿ ಎರಡು ದೇಶದ ಅಭಿಮಾನಿಗಳು ಕಿತ್ತಾಡಿಕೊಂಡಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಆಗಸದಲ್ಲಿ ಜಸ್ಟಿಸ್ ಫಾರ್ ಬಲೂಚಿಸ್ತಾನ ಎಂಬ ಬರಹ ಹೊಂದಿದ್ದ ಬ್ಯಾನರ್ ಕಟ್ಟಿಕೊಂಡು ವಿಮಾನವೊಂದು ಹಾರಾಟ ನಡೆಸಿತ್ತು. ಇದೇ ವಿಷಯ ಎರಡು ದೇಶಗಳ ನಡುವಿನ ಜಗಳಕ್ಕೆ ಕಾರಣ ಎಂದು ಹೇಳಲಾಗಿದೆ. ಇದಕ್ಕೂ ಮುಂಚಿತವಾಗಿ ಗೇಟ್ನೊಳಗೆ ಪ್ರವೇಶ ಪಡೆದುಕೊಳ್ಳುವ ವಿಚಾರವಾಗಿ ಸಹ ಕಿತ್ತಾಡಿಕೊಂಡಿದ್ದಾರೆ.
ಇನ್ನು ಪಂದ್ಯ ವೀಕ್ಷಣೆ ಮಾಡುತ್ತಿದ್ದಾಗಲೂ ಎರಡು ದೇಶದ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.