ಕರ್ನಾಟಕ

karnataka

ETV Bharat / sports

ರಶೀದ್ ಇಗ್ಲೆಂಡ್ ಟೆಸ್ಟ್​ ತಂಡಕ್ಕೆ ಹಿಂದಿರುಗುವ ಆಕಾಂಕ್ಷೆ ಹೊಂದಿದ್ದಾರೆ: ಎಡ್ ಸ್ಮಿತ್ - ಟೆಸ್ಟ್ ತಂಡಕ್ಕೆ ಆದಿಲ್ ರಶೀದ್ ವಾಪಸ್

ಇಂಗ್ಲೆಂಡ್ ತಂಡದ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಟೆಸ್ಟ್ ತಂಡಕ್ಕೆ ಹಿಂದಿರುಗುವ ಆಕಾಂಕ್ಷೆ ಹೊಂದಿದ್ದಾರೆ ಎಂದು ಇಂಗ್ಲೆಂಡ್ ರಾಷ್ಟ್ರೀಯ ಸೆಲೆಕ್ಟರ್ ಎಡ್ ಸ್ಮಿತ್ ಹೇಳಿದ್ದಾರೆ.

Adil Rashid
ಆದಿಲ್ ರಶೀದ್

By

Published : Aug 20, 2020, 1:07 PM IST

ಲಂಡನ್: ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಇನ್ನೂ ಟೆಸ್ಟ್ ಪಂದ್ಯದ ಬೌಲರ್ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ ಎಂದು ರಾಷ್ಟ್ರೀಯ ಸೆಲೆಕ್ಟರ್ ಎಡ್ ಸ್ಮಿತ್ ಹೇಳಿದ್ದಾರೆ.

ರಶೀದ್ ಇಂಗ್ಲೆಂಡ್‌ನ ವೈಟ್-ಬಾಲ್ ತಂಡಗಳಲ್ಲಿ ನಿಯಮಿತರಾಗಿದ್ದು, ಇತ್ತೀಚೆಗೆ ಏಕದಿನ ಸ್ವರೂಪದಲ್ಲಿ 150 ವಿಕೆಟ್‌ ಪಡೆದಿದ್ದಾರೆ. ಆದರೆ 2019ರ ಜನವರಿಯಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಮತ್ತೆ ಟೆಸ್ಟ್​ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

ಆದಿಲ್ ರಶೀದ್

ಆದಿಲ್ ಭುಜದ ಗಾಯದಿಂದ ಚೇತರಿಸಿಕೊಂಡಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಕೌಶಲ್ಯ ಮತ್ತು ಪಾಂಡಿತ್ಯವನ್ನು ನಾವೆಲ್ಲರೂ ನೋಡಿದ್ದೇವೆ. ಅವರು ಇಂಗ್ಲೆಂಡ್​ ಪರ ಎಲ್ಲಾ ಸ್ವರೂಪದ ಕ್ರಿಕೆಟ್​ ಆಡುವ ಆಕಾಂಕ್ಷೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಆದಿಲ್ ರಶೀದ್

ರಶೀದ್ ಕೊನೆಯ ಬಾರಿಗೆ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ಕಾಣಿಸಿಕೊಂಡಿದ್ದರು. ಅದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು. ಆಗಸ್ಟ್ 28ರಿಂದ ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ-20 ಸರಣಿಯಲ್ಲಿ ಆದಿಲ್ ರಶೀದ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ABOUT THE AUTHOR

...view details