ಮುಂಬೈ: ಡಿಸೆಂಬರ್ 24 ರಂದು ಬಿಸಿಸಿಐನ 89ನೇ ಸಾಮಾನ್ಯ ವಾರ್ಷಿಕ ಸಭೆ ನಡೆಯಲಿದ್ದು, ಈ ವೇಳೆ 2021ರ ಐಪಿಎಲ್ಗೆ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸುವ ವಿಚಾರವೇ ಸಭೆಯಲ್ಲಿ ಚರ್ಚಿಸುವ ವಿಚಾರ ಪ್ರಮುಖ ಅಜೆಂಡವಾಗಲಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯಸ್ಥರಿಗೆ ಬಿಸಿಸಿಐ ನೋಟೀಸ್ ನೀಡಿದೆ.
ಐಪಿಎಲ್ಗೆ ಮತ್ತೆರಡು ತಂಡಗಳನ್ನು ಸೇರಿಸಲು ರಾಜ್ಯ ಕ್ರಿಕೆಟ್ ಸಂಘಗಳ ಪ್ರತಿನಿಧಿಗಳು ಅನುಮೋದನೆ ನೀಡಬೇಕಾಗುತ್ತದೆ. ಅದಕ್ಕಾಗಿ ಬಿಸಿಸಿಐ ಕಾರ್ಯಾದರ್ಶಿ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಮೀಟಿಂಗ್ಗೆ ಸ್ಥಳವನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ.