ನವದೆಹಲಿ: ವಿಶ್ವಕ್ರಿಕೆಟ್ ಕಂಡಂತಹ ಸ್ಫೋಟಕ ಬ್ಯಾಟ್ಸ್ಮನ್ ಆಸೀಸ್ ಮಾಜಿ ವಿಕೆಟ್ ಕೀಪರ್ ಆ್ಯಂಡಂ ಗಿಲ್ಕ್ರಿಸ್ಟ್ ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಂದು ಬಹಿರಂಗ ಪಡಿಸಿದ್ದಾರೆ.
ತಮ್ಮ ದಶಕಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರುಳೀದರನ್ ಅವರ ಬೌಲಿಂಗ್ ಎದುರಿಸುವುದು ಅತ್ಯಂತ ಕಠಿಣವಾಗಿತ್ತು ಎಂದು ಗಿಲ್ಲಿ ಬಹಿರಂಗ ಪಡಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ನೊಂದಿಗೆ ತಮ್ಮ ಈ ವಿಚಾರವನ್ನು ಹಂಚಿಕೊಂಡಿದ್ದು 2001ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಜ್ಜಿ ಬೌಲಿಂಗ್ಗೆ ತಿಣುಕಾಡಿದ್ದ ಬಗ್ಗೆ ಮೆಲುಕು ಹಾಕಿದ್ದಾರೆ.
2001ರಲ್ಲಿ ಸ್ವಿವ್ ವಾ ಅವರ ನಾಯಕತ್ವದಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದೆವು. ನಮ್ಮ ತಂಡ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು 176 ರನ್ಗಳಿಗೆ ಆಲೌಟ್ ಮಾಡಿದೆವು. ಮೊದಲ ಇನ್ನಿಂಗ್ಸ್ ಆರಂಭಿಸಿದ ನಮ್ಮ ತಂಡ ಕೇವಲ 99 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ನಾನು 80 ಎಸೆತಗಳಿಗೆ ಶತಕ ಸಿಡಿಸಿದೆ. ಆ ಪಂದ್ಯವನ್ನು ನಾವು ಮೂರೇ ದಿನಗಳಲ್ಲಿ ಗೆದ್ದುಕೊಂಡಿದ್ದೆವು. ಇದೇ ರೀತಿ ಮುಂದಿನ ಪಂದ್ಯಗಳನ್ನು ಗೆಲ್ಲಬುಹುದು ಎಂದು ಚಿಂತಿಸಿದ್ದೆವು. ಆದರ ನಮ್ಮ ಆಲೋಚನೆ ತಲೆಕೆಳಗಾಗಿ ಮಾಡಿದವರು ಅಂದಿನ ಯುವ ಬೌಲರ್ ಹರ್ಭಜನ್ ಸಿಂಗ್. ಮುಂದಿನ ಪಂದ್ಯಗಳಲ್ಲಿ ಹರ್ಭಜನ್ ನಮ್ಮ ತಂಡವನ್ನು ಕಾಡತೊಡಗಿದರು. ಅಂದಿನಿಂದ ಟೆಸ್ಟ್ನಲ್ಲಿ ಆಕ್ರಮಣ ಆಟ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ನನ್ನ ಅರಿವಿಗೆ ಬಂತು ಎಂದು ಅವರು 2001 ರ ಬಾರ್ಡರ್ ಗವಾಸ್ಕರ್ ಸರಣಿ ಸೋಲಿನ ಕುರಿತು ವಿವರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಗಿಲ್ಲಿ ನಂತರ 2 ನೇ ಟೆಸ್ಟ್ನಲ್ಲಿ ಕಿಂಗ್ಪೈರ್(ಎರಡೂ ಇನ್ನಿಂಗ್ಸ್ನಲ್ಲೂ ಗೋಲ್ಡನ್ ಡಕ್) ಸಂಪಾದಿಸಿದ್ದರು. ಕೊನೆಯ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಸಿಂಗಲ್ ರನ್ಗೆ ವಿಕೆಟ್ ಒಪ್ಪಿಸಿದ್ದರು. ಅಂದು ಆಸ್ಟ್ರೇಲಿಯಾವನ್ನು ಧೂಳಿಪಟ ಮಾಡಿದ್ದ ಯುವ ಬೌಲರ್ ಹರ್ರಭಜನ್ ಸಿಂಗ್. ಭಜ್ಜಿ ಆ ಸರಣಿಯಲ್ಲಿ 32 ವಿಕೆಟ್ ಪಡೆದು ಆಸ್ಟ್ರೇಲಿಯನ್ನರ ಸತತ 16ಟೆಸ್ಟ್ಗಳ ವಿಜಯಕ್ಕೆ ಬ್ರೇಕ್ ಹಾಕಿದರಲ್ಲದೆ ಸರಣಿಯನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದರು.