ಢಾಕಾ:ಎಮರ್ಜಿಂಗ್ ಏಷ್ಯಾಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಸೋಲು ಕಂಡು ಸರಣಿಯಿಂದ ಹೊರಬಿದ್ದಿದೆ.
ಏಷ್ಯಾಕಪ್ ಕ್ರಿಕೆಟ್ ಸೆಮಿಫೈನಲ್: ರೋಚಕ ಹಂತದಲ್ಲಿ ಪಾಕ್ ವಿರುದ್ಧ ಸೋತ ಯಂಗ್ ಇಂಡಿಯಾ! - ಪಾಕ್ ವಿರುದ್ಧ ಸೋತ ಟೀಂ ಇಂಡಿಯಾ
23 ವರ್ಷದೊಳಗಿನ ಎಮರ್ಜಿಂಗ್ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
![ಏಷ್ಯಾಕಪ್ ಕ್ರಿಕೆಟ್ ಸೆಮಿಫೈನಲ್: ರೋಚಕ ಹಂತದಲ್ಲಿ ಪಾಕ್ ವಿರುದ್ಧ ಸೋತ ಯಂಗ್ ಇಂಡಿಯಾ! ](https://etvbharatimages.akamaized.net/etvbharat/prod-images/768-512-5128817-thumbnail-3x2-wdfdfdf.jpg)
ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ 23 ವರ್ಷದೊಳಗಿನ ಏಷ್ಯಾಕಪ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ಯುಸೂಫ್ ಗಳಿಸಿದ 66ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 267ರನ್ಗಳಿಕೆ ಮಾಡಿತು.
ಭಾರತಕ್ಕೆ ಕೊನೆ ಓವರ್ನಲ್ಲಿ ಗೆಲುವು ದಾಖಲು ಮಾಡಲು 8ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡಿದ ಅಮಾದ್ ಭಟ್ ಕೇವಲ 4ರನ್ ಬಿಟ್ಟುಕೊಟ್ಟು, ತಂಡಕ್ಕೆ ಮಾರಕವಾದರು. ಭಾರತದ ಪರ ಸನ್ವೀರ್ ಸಿಂಗ್ 76ರನ್, ಜಾಫರ್ 46 ಹಾಗೂ ಶರತ್ 47ರನ್ಗಳಿಕೆ ಮಾಡಿದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ಹಾಗೂ ಆಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿದ್ದು ಗೆಲುವು ಸಾಧಿಸುವ ತಂಡ ಫೈನಲ್ನಲ್ಲಿ ಪಾಕ್ ವಿರುದ್ಧ ಪ್ರಶಸ್ತಿಗಾಗಿ ಫೈಟ್ ನಡೆಸಲಿದೆ.