ಕರ್ನಾಟಕ

karnataka

ETV Bharat / sports

ಅಫ್ಘಾನ್ ವಿಕೆಟ್​ ಕೀಪರ್​, ಸ್ಫೋಟಕ ಬ್ಯಾಟ್ಸ್​ಮನ್​ಗೆ ಒಂದು ವರ್ಷ ನಿಷೇಧ! - ಎಸಿಬಿ

ವಿದೇಶಿ ಪ್ರಯಾಣ ಕೈಗೊಳ್ಳುವ ಮೊದಲು ಎಸಿಬಿಯ ಅನುಮತಿ ಪಡೆಯದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಎಸಿಬಿ ಸ್ಫೋಟಕ ದಾಂಡಿಗನ ಮೇಲೆ ನಿಷೇಧ ಹೇರಲಾಗಿದೆ. ಕಳೆದ ತಿಂಗಳು ಅನಿರ್ದಿಷ್ಟಾವಧಿಗೆ ನಿಷೇಧ ಹೇರಿಕೆ ಮಾಡಿ ತನಿಖೆ ಕೈಗೊಂಡಿತ್ತು. ಇದೀಗ ಅವರು ಪದೇಪದೆ ಅನುಮತಿ ಪಡೆಯದೆ ವಿದೇಶಿ ಪ್ರವಾಸ ಮಾಡಿರುವುದು ಖಚಿತವಾದ ಬೆನ್ನಲ್ಲೇ ಅವರಿಗೆ ಒಂದು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್​ ಆಡದಂತೆ ನಿಷೇಧ ಹೇರಲಾಗಿದೆ.

Mohammad Shahzad

By

Published : Aug 19, 2019, 5:38 PM IST

ನವದೆಹಲಿ:ಅಫ್ಘಾನಿಸ್ಥಾನದ ವಿಕೆಟ್​ ಕೀಪರ್​ ಮೊಹ್ಮದ್​​ ಶಹ್ಜಾದ್​ಗೆ ಅಫ್ಘಾನಿಸ್ಥಾನ ಕ್ರಿಕೆಟ್​ ಮಂಡಳಿ ಒಂದುವರ್ಷ ನಿಷೇಧ ಹೇರಿದೆ.

ವಿದೇಶಿ ಪ್ರಯಾಣ ಕೈಗೊಳ್ಳುವ ಮೊದಲು ಎಸಿಬಿಯ ಅನುಮತಿ ಪಡೆಯದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಎಸಿಬಿ ಸ್ಫೋಟಕ ದಾಂಡಿಗನ ಮೇಲೆ ನಿಷೇಧ ಹೇರಿದೆ. ಕಳೆದ ತಿಂಗಳು ಅನಿರ್ದಿಷ್ಟಾವಧಿಗೆ ನಿಷೇಧ ಹೇರಿಕೆ ಮಾಡಿ ತನಿಖೆ ಕೈಗೊಂಡಿತ್ತು. ಇದೀಗ ಅವರು ಪದೇಪದೆ ಅನುಮತಿ ಪಡೆಯದೆ ವಿದೇಶಿ ಪ್ರವಾಸ ಮಾಡಿರುವುದು ಖಚಿತವಾದ ಬೆನ್ನಲ್ಲೇ ಅವರಿಗೆ ಒಂದು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್​ ಆಡದಂತೆ ನಿಷೇಧ ಹೇರಿಕೆ ಮಾಡಲಾಗಿದೆ.

ಶಹ್ಜಾದ್​ ನಿಷೇಧಕ್ಕೊಳಗಾಗುತ್ತಿರುವುದು ಇದೇ ಮೊದಲೇನಲ್ಲ. 2017ರಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಇನ್ನು ವಿಶ್ವಕಪ್​ನಲ್ಲಿ ಮಂಡಿಗಾಯಕ್ಕೆ ತುತ್ತಾಗಿ ಅರ್ಧದಲ್ಲೇ ವಿಶ್ವಕಪ್​ನಿಂದ ಹೊರಬಿದ್ದಿದ್ದರು. ಆ ಸಮಯದಲ್ಲಿಯೂ ನಾನು ಫಿಟ್​ ಆಗಿದ್ದು, ಎಸಿಬಿ ಬೇಕೆಂದೇ ತನ್ನನ್ನು ತಂಡದಿಂದ ಕೈಬಿಟ್ಟಿದೆ ಎಂದು ಕಿಡಿಕಾರಿ ಬೋರ್ಡ್​ ಕೆಂಗಣ್ಣಿಗೂ ಗುರಿಯಾಗಿದ್ದರು.

ABOUT THE AUTHOR

...view details