ಅಬುಧಾಬಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ-10 ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾರ್ದರ್ನ್ ವಾರಿಯರ್ಸ್ ದೆಹಲಿ ಬುಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.
ಟಾಸ್ ಗೆದ್ದು ವಾರಿಯರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ದೆಹಲಿ ಬುಲ್ಸ್ ತಂಡ ನಿಗಧಿತ 10 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 81 ರನ್ಗಳಿಸಿತು. ಬುಲ್ಸ್ ಪರ ಮೊಹಮ್ಮದ್ ನಬಿ 10 ಎಸೆತಗಳಲ್ಲಿ 21 ರನ್ ಗಳಿಸಿ ಮಿಂಚಿದರೆ, ವಾರಿಯರ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ಆಫ್ ಸ್ಪಿನ್ನರ್ ಮಹೀಶ್ ಥೀಕ್ಷಾನಾ ತಮ್ಮ ಎರಡು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಮೂರು ವಿಕೆಟ್ ಪಡೆದರು.