ಮುಂಬೈ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಬೌಲರ್ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿರುವುದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಸದ್ಯ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಂದಿದ್ದಾರೆ.
"ಜನಾಂಗೀಯ ನಿಂದನೆ ಸ್ವೀಕಾರಾರ್ಹವಲ್ಲ. ಬೌಂಡರಿ ಗೆರೆಯಲ್ಲಿ ಇಂತಹ ಅಸಹ್ಯವೆನಿಸುವ ಅನೇಕ ಘಟನೆಗಳು ನಡೆಸದಿರುವುದು ರೌಡಿ ವರ್ತನೆಯ ಪರಮಾವಧಿ. ಮೈದಾನದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್ ಅಶ್ವಿನ್
ಈ ಘಟನೆಯನ್ನು ಆದಷ್ಟು ತುರ್ತಾಗಿ ಮತ್ತು ಗಂಭೀರತೆಯಿಂದ ನೋಡಬೇಕಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮತ್ತೊಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಸಿರಾಜ್ರನ್ನು ಪ್ರೇಕ್ಷಕರು ಕಂದು ನಾಯಿ, ದೊಡ್ಡ ಕೋತಿ ಎಂದು ನಿಂದಿಸಿದ್ದಾರೆ : ಬಿಸಿಸಿಐ ಮೂಲ
ಭಾನುವಾರ ಸಿರಾಜ್ರನ್ನು ನಿಂದಿಸಿದ ಪ್ರೇಕ್ಷಕರನ್ನು ಮೈದಾನದಿಂದ ಹೊರಕಳುಹಿಸಿ ನ್ಯೂ ಸೌತ್ ವೇಲ್ಸ್ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಗೆ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಭಾರತೀಯರ ಕ್ಷಮೆ ಕೋರಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದೆ.
ಇದನ್ನೂ ಓದಿ: ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್ ಕಿಡಿ