ಲಂಡನ್:ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಕ್ರಿಕೆಟ್ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕೂ ಅವರು ಪಡೆದಿರುವ ಶ್ರೇಯಾಂಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಿಡಿಕಾರಿದ್ದಾರೆ.
ಇಂಗ್ಲೆಂಡ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 4ರಲ್ಲೂ ನ್ಯೂಜಿಲ್ಯಾಂಡ್ 2ನೇ ಸ್ಥಾನದಲ್ಲೂ ಇವೆ. ಆದರೆ ಅವೆರಡು ತಂಡಗಳು ಟೆಸ್ಟ್ ಕ್ರಿಕೆಟ್ನಲ್ಲಿ ನೀಡುತ್ತಿರುವ ಪ್ರದರ್ಶನ ಮಾತ್ರ ನಿಜಕ್ಕೂ ಕೆಟ್ಟದಾಗಿದೆ ಎಂದು ಕಸಕ್ಕೆ ಹೋಲಿಕೆ ಮಾಡಿ ಕಿಡಿಕಾರಿದ್ದಾರೆ.
ಇಂತಹ ಕೆಟ್ಟ ಪ್ರದರ್ಶನ ತೋರುವ ನ್ಯೂಜಿಲ್ಯಾಂಡ್ ಕಳೆದ ಎರಡು ವರ್ಷಗಳಲ್ಲಿ ಅಷ್ಟೊಂದು ಸರಣಿಗಳನ್ನು ಹೇಗೆ ಗೆದ್ದಿದೆ ಎಂಬುದೇ ತಿಳಿಯುತ್ತಿಲ್ಲ. ಜೊತೆಗೆ ಎರಡನೇ ಶ್ರೇಯಾಂಕ ಬೇರೆ ಪಡೆಕೊಂಡಿದ್ದಾರೆ. ಅದೇ ರೀತಿ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ತವರು ತಂಡದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಇಂಗ್ಲೆಂಡ್ ತವರಿನಲ್ಲಿ ಮಾತ್ರ ಟೆಸ್ಟ್ ಸರಣಿ ಗೆದ್ದಿದೆ. ಆ್ಯಶಸ್ ಸರಣಿಯನ್ನು ಡ್ರಾ ಸಾಧಿಸಿಕೊಂಡಿದೆ. ಅಲ್ಲದೆ ಐರ್ಲೆಂಡ್ ತಂಡವನ್ನು ಮಾತ್ರ ಸೋಲಿಸಿದ್ದಾರೆ. ಆದರೆ, ಐಸಿಸಿ ರ‍್ಯಾಂಕಿಂಗ್ ಮಾತ್ರ ನನಗೆ ಗೊಂದಲವನ್ನುಂಟು ಮಾಡಿದೆ. ನನ್ನ ಪ್ರಕಾರ ಎರಡನೇ ಬೆಸ್ಟ್ ತಂಡವಾಗಿರುವ ನ್ಯೂಜಿಲ್ಯಾಂಡ್ಗಿಂತ 5ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತುಂಬಾ ಅತ್ಯುತ್ತಮ ತಂಡ. ಅದರಲ್ಲೂ ವಿದೇಶದಲ್ಲಿ ನೀಡುವ ಪ್ರದರ್ಶನ ನೋಡಿದರೆ ಆಸೀಸ್ ನಿಜಕ್ಕೂ ಉತ್ತಮ ತಂಡ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ- ಭಾರತ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡಗಳು ಎಂಬುವುದರಲ್ಲಿ ಯಾವುದೇ ಗೊಂದಲವಿಲ್ಲ. ಭಾರತ ತಂಡ ಮಾತ್ರ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ನರನ್ನೇ ಮಣಿಸಬಲ್ಲದು. ಕಳೆದ 12 ತಿಂಗಳ ಹಿಂದೆಯೇ ಅದು ಸಾಬೀತಾಗಿದೆ ಎಂದು ಭಾರತ ತಂಡವನ್ನು ಕೊಂಡಾಡಿದ್ದಾರೆ.
ಭಾರತ ಕಳೆದ ಆಸೀಸ್ ಪ್ರವಾಸದ ವೇಳೆ ವಾರ್ನರ್, ಸ್ಮಿತ್ ಹಾಗೂ ಲಾಬುಶೇನ್ ಇಲ್ಲದಿರಬಹುದು. ಆದರೆ ಮುಂದಿನ ಸರಣಿ ವೇಳೆ ಆ ತಂಡದ ಎಲ್ಲ ಆಟಗಾರರು ಫಿಟ್ ಇದ್ದರೆ ಖಂಡಿತ ಮತ್ತೆ ಮೇಲುಗೈ ಸಾಧಿಸಲಿದೆ. ಭಾರತ ತಂಡದಲ್ಲಿ ಉತ್ತಮ ವೇಗಿಗಳು, ಅನುಭವಿ ಸ್ಪಿನ್ನರ್ಗಳು ಹಾಗೂ ಅನುಭವಿ ಬ್ಯಾಟ್ಸ್ಮನ್ಗಳ ದಂಡೇ ಇದೆ. ಆಸೀಸ್ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಏಕೈಕ ತಂಡವೆಂದರೆ ಅದು ಭಾರತ ಮಾತ್ರ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.