ಕರ್ನಾಟಕ

karnataka

ETV Bharat / sports

ಬಿಲ್ಲುಗಾರಿಕೆ: ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಕ್ಕೆ ಬಾಣ ಬಿಟ್ಟ ಅಭಿಷೇಕ್‌-ಜ್ಯೋತಿ - undefined

ಭಾರತದ ಬಿಲ್ಲುಗಾರಿಕೆಯ ಪ್ರತಿಭಾನ್ವಿತ ಜೋಡಿ ಅಭಿಷೇಕ್‌-ಜ್ಯೋತಿ ಜೋಡಿ ಏಷ್ಯನ್‌ ಚಾಂಪಿಯನ್‌ಶಿಪ್‌ನ ಮಿಶ್ರ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಈ ಜೋಡಿ ಚೈನೀಸ್​ ತೈಪೆಯ ಯಿ ಹ್ಸುವಾನ್​ ಚೆನ್​ ಮತ್ತು ಚಿಹ್​-ಲುಹ್ ಚೆನ್​ ಅವರನ್ನು 158-151ರ ಪಾಯಿಂಟುಗಳ ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

Abhishek Verma-Jyoti Surekha
Abhishek Verma-Jyoti Surekha

By

Published : Nov 27, 2019, 4:50 PM IST

ಬ್ಯಾಂಕಾಕ್​:ಭಾರತದ ಅಭಿಷೇಕ್​ ವರ್ಮಾ ಮತ್ತು ಜ್ಯೋತಿ ಸುರೇಖ ವೆನ್ನಮ್ ಜೋಡಿ​ ಬ್ಯಾಂಕಾಕ್​ನಲ್ಲಿ ನಡೆಯುತ್ತಿರುವ ಏಷ್ಯನ್​ ಅರ್ಚರಿ ಚಾಂಪಿಯನ್​ಶಿಪ್​ನ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಚೈನೀಸ್​ ತೈಪೆಯ ಯಿ ಹ್ಸುವಾನ್​ ಚೆನ್​ ಮತ್ತು ಚಿಹ್​-ಲುಹ್ ಚೆನ್​ ವಿರುದ್ಧ ಈ ಜೋಡಿ 158-151ರ ಅಂತರದಲ್ಲಿ ಮಣಿಸಿ ಈ ಸಾಧನೆ ಮಾಡಿದ್ರು.

ಇನ್ನು ಮಹಿಳೆಯರ ಕಾಂಪೌಂಡ್‌ ವಿಭಾಗದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ವೆನ್ನಮ್, ಮುಸ್ಕಾನ್ ಕಿರರ್ ಮತ್ತು ಪ್ರಿಯಾ ಗುರ್ಜರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಟ್ಟಾರೆ ಟೂರ್ನಿಯಲ್ಲಿ ಭಾರತದ ಸ್ಪರ್ಧಾಳುಗಳು ಒಂದು ಚಿನ್ನ, 2 ಬೆಳ್ಳಿ ಹಾಗು 4 ಕಂಚಿನ ಪದಕ ಪಡೆದರು.

For All Latest Updates

TAGGED:

ABOUT THE AUTHOR

...view details