ಕರ್ನಾಟಕ

karnataka

ETV Bharat / sports

ಹುಟ್ಟುಹಬ್ಬದ ದಿನವೇ ಮಿಂಚಿದ ಮಿಥುನ್: ಕನ್ನಡಿಗನಿಂದ ದಾಖಲೆಯ ಹ್ಯಾಟ್ರಿಕ್ ಸಾಧನೆ!

ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ರಾಟ್ರಿಕ್ ಸಂಪಾದಿಸಿದ ಎರಡನೇ ಆಟಗಾರ ಎನ್ನುವ ಗೌರವಕ್ಕೂ ಮಿಥುನ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದವರಲ್ಲಿ ಮುರಳಿ ಕಾರ್ತಿಕ್ ಮೊದಲಿಗರಾಗಿದ್ದಾರೆ.

ಮಿಥುನ್

By

Published : Oct 25, 2019, 2:53 PM IST

Updated : Oct 25, 2019, 4:04 PM IST

ಬೆಂಗಳೂರು:ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪೈನಲ್ ಪಂದ್ಯದಲ್ಲಿ ಆತಿಥೇಯ ತಂಡದ ವೇಗದ ಬೌಲರ್ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

49.3, 49.4, 49.5ನೇಎಸೆತದಲ್ಲಿ ಕ್ರಮವಾಗಿ ಶಾರುಖ್ ಖಾನ್, ಎಂ.ಮೊಹಮ್ಮದ್ ಹಾಗೂ ಮುರುಗನ್ ಅಶ್ವಿನ್​ರನ್ನು ಔಟ್ ಮಾಡುವ ಮೂಲಕ ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಕನ್ನಡಿಗ ಎನ್ನುವ ಕೀರ್ತಿಗೆ ಪಾತ್ರರಾದರು.

ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ರಾಟ್ರಿಕ್ ಸಂಪಾದಿಸಿದ ಎರಡನೇ ಆಟಗಾರ ಎನ್ನುವ ಗೌರವಕ್ಕೂ ಮಿಥುನ್ ಪಾತ್ರರಾಗಿದ್ದಾರೆ. ಮುರಳಿ ಕಾರ್ತಿಕ್ ಮೊದಲಿಗರಾಗಿದ್ದಾರೆ.

ಇಂದಿನ ಆಟದಲ್ಲಿ ಒಟ್ಟಾರೆ 9.5 ಓವರ್ ಎಸೆತದ ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದರು. ಆರಂಭಿಕ ಆಟಗಾರ ಮುರಳಿ ವಿಜಯ್​​ರನ್ನು ಬಲಿಪಡೆದ ಮಿಥುನ್ ನಂತರದಲ್ಲಿ ವಿಜಯ್ ಶಂಕರ್​ನ್ನು ಔಟ್ ಮಾಡಿದರು. ಕೊನೆಯಲ್ಲಿ ಹ್ಯಾಟ್ರಿಕ್ ಪಡೆದು 5 ವಿಕೆಟ್ ಗೊಂಚಲು ಸಾಧನೆಯನ್ನೂ ಮಾಡಿದರು.

ಹುಟ್ಟಹಬ್ಬದ ದಿನವೇ ಮಿಥುನ್ ಮಿಂಚು:

ಇಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಿಥುನ್​​ ಹ್ಯಾಟ್ರಿಕ್ ಪಡೆಯುವ ಮೂಲಕ ಜನ್ಮದಿನ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ.

Last Updated : Oct 25, 2019, 4:04 PM IST

ABOUT THE AUTHOR

...view details