ಸೂರತ್: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಟಿ-20 ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಹೊಸ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಸೂರತ್ನ ಮೈದಾನದಲ್ಲಿ ನಡೆದ ಸೆಮಿಫೈನಲ್ನ ಕೊನೆ ಓವರ್ನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ಮೊದಲ ಮೂರು ಓವರ್ಗಳಲ್ಲಿ 37ರನ್ ನೀಡಿ ಯಾವುದೇ ವಿಕೆಟ್ ಪಡೆದುಕೊಳ್ಳಲು ವಿಫಲವಾಗಿದ್ದ ಮಿಥುನ್ ಕೊನೆ ಓವರ್ನಲ್ಲಿ ಕೇವಲ 2ರನ್ ನೀಡಿ ಬರೋಬ್ಬರಿ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲ ನಾಲ್ಕು ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಪಡೆದರೆ ಮುಂದಿನ ಎಸೆತದಲ್ಲಿ ವೈಡ್ ಮತ್ತು ಒಂಟಿ ರನ್ ತೆಗೆಯಲಾಯಿತು. ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಹೀಗಾಗಿ ಕೊನೆ ಓವರ್ನಲ್ಲಿ ಮಿಥುನ್ ಹ್ಯಾಟ್ರಿಕ್ ಸೇರಿ ಐದು ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಾಣ ಮಾಡಿದರು.