ಹೈದರಾಬಾದ್: ತನಗೆ 5 ರಿಂದ 6 ಜನ ಹುಡುಗಿಯರ ಜೊತೆ ಸಂಬಂಧವಿತ್ತು ಎಂದು ಪಾಕಿಸ್ತಾನ ತಂಡದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಜಾಕ್ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ನನಗೆ ಸುಮಾರು 5 ರಿಂದ 6 ಹುಡುಗಿಯರ ಜೊತೆ ಸಂಬಂಧವಿತ್ತು. ಪ್ರತಿಯೋಂದು ಸಂಬಂಧಕ್ಕೂ ಎಕ್ಸ್ಪೈರ್ ಡೇಟ್ ಇರುತ್ತದೆ. ಕೆಲವು ಸಂಬಂಧಗಳು 1 ವರ್ಷಕ್ಕೆ ಮುರಿದು ಬಿದ್ದರೆ, ಕೆಲವು ಸಂಬಂಧಗಳು ಒಂದೂವರೆ ವರ್ಷದವರೆಗೂ ಇದ್ದವು ಎಂದಿದ್ದಾರೆ.