ನವದೆಹಲಿ:ಮಾನವೀಯತೆ, ಸಮಾನತೆ ಸಂದೇಶ ಸಾರುವ ಹಾಡುವೊಂದನ್ನ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಹಾಡಿದ್ದು, ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾನವೀಯತೆ,ಸಮಾನತೆ ಸಂದೇಶ ಸಾರುವ ಹಾಡು ಹಾಡಿದ ಎಬಿಡಿ, ಸಾಥ್ ನೀಡಿದ ಕೊಹ್ಲಿ, ಚಹಲ್! - ಎಬಿ ಡಿವಿಲಿಯರ್ಸ್ ಇತ್ತೀಚಿನ ಸುದ್ದಿ
ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದಿನಿಂದಲೂ ವರ್ಣಭೇದ ನೀತಿ ತಾರತಮ್ಯ ಹೆಚ್ಚಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಎಬಿಡಿ ಹಾಡವೊಂದನ್ನ ಹಾಡಿದ್ದಾರೆ.
![ಮಾನವೀಯತೆ,ಸಮಾನತೆ ಸಂದೇಶ ಸಾರುವ ಹಾಡು ಹಾಡಿದ ಎಬಿಡಿ, ಸಾಥ್ ನೀಡಿದ ಕೊಹ್ಲಿ, ಚಹಲ್! AB de Villiers releases song](https://etvbharatimages.akamaized.net/etvbharat/prod-images/768-512-9373857-thumbnail-3x2-wdfdfd.jpg)
ವರ್ಣಭೇದ ನೀತಿಯ ವಿರುದ್ಧದ ಹೋರಾಟದ ಹಾಡು ಇದಾಗಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಎಬಿ ಡಿವಿಲಿಯರ್ಸ್ ಭಿನ್ನವಾದ ನಿಲುವು ತೆಗೆದುಕೊಂಡು ಈ ಹಾಡು ಹಾಡಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಎಬಿಡಿ ಆಟವಾಡ್ತಿದ್ದಾರೆ.
ನಿನ್ನೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಡಿನ ಪ್ರೋಮೋ ರಿಲೀಸ್ ಮಾಡಿದ್ದು, ಏಜ್ ವಿ ರನ್ ಥ್ರೂ ದಿ ಫೈರ್ ವಿ ಫೈಂಡ್ ದಿ ಫ್ಲೇಮ್ ಎಂಬ ಶೀರ್ಷಿಕೆಯಲ್ಲಿದೆ. ದಕ್ಷಿಣ ಆಫ್ರಿಕಾದ ಗಾಯಕ ಕರೆನ್ ಜೊಯಿಡ್ ಮತ್ತು ಎನ್ಡಿಲೋವ್ ಯೂತ್ ಇದರಲ್ಲಿ ಹಾಡಿದ್ದಾರೆ. ಹಾಡಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಡೇಲ್ ಸ್ಟೇನ್, ಕ್ರಿಸ್ ಮೋರಿಸ್, ಕಗಿಸೋ ರಬಾಡಾ, ಯಜುವೇಂದ್ರ ಚಹಲ್, ಎಬಿಡಿ ಮಕ್ಕಳು ಸೇರಿದಂತೆ ಅನೇಕರು ಇದ್ದಾರೆ.