ದುಬೈ: ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ವಿದಾಯ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಮಿ.360 ಬ್ಯಾಟ್ಸ್ಮನ್ ಎಂದೇ ಹೆಸರಾದ ದ.ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಇಂದಿನಿಂದ ಮತ್ತೆ ಬ್ಯಾಟ್ ಹಿಡಿದು ಘರ್ಜಿಸಲಿದ್ದಾರೆ.
ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳಿರುವ ಎಬಿಡಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ನಿರಾಸೆ ಮೂಡಿಸಿದ ಎಬಿಡಿ ಚುಟುಕು ಕ್ರಿಕೆಟ್ ಲೀಗ್ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದರೆಂದರೆ ಟಿ20 ಲೀಗ್. ಐಪಿಎಲ್, ಸಿಪಿಎಲ್, ಬಿಬಿಎಲ್, ಬಿಪಿಎಲ್, ನಾಟ್ವೆಸ್ಟ್ ಟಿ20 ಬ್ಲಾಸ್ಟ್, ಮಜಾನ್ಸಿ ಪ್ರೀಮಿಯರ್ ಹೀಗೆ ಹಲವಾರು ಚುಟುಕು ಕ್ರಿಕೆಟ್ ಲೀಗ್ಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಪ್ರಮುಖ ಆಟಗಾರರಿಗೆ ಅವಕಾಶ ವಿರುವುದರಿಂದ, ಈ ಲೀಗ್ಗಳ ಮೂಲಕ ನಿವೃತ್ತಿಯ ನಂತರವೂ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಕಳೆದವಾರ ಮುಕ್ತಾಯವಾದ ಬಿಪಿಎಲ್ನಲ್ಲಿ ಪಾಲ್ಗೊಂಡು ಶತಕಗಳಿಸಿ ಮಿಂಚಿದ್ದ ಎಬಿಡಿ, ಇಂದಿನಿಂದ ಶುರುವಾಗಲಿರುವ ಪಿಎಸ್ಎಲ್ನಲ್ಲಿ ಮೊಹಮ್ಮದ್ ಹಫೀಜ್ ನೇತೃತ್ವದ ಲಾಹೋರ್ ಖಲಾಂಡರ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.
ಪಿಎಸ್ಎಸ್ನ ಮೊದಲ ಪಂದ್ಯ ಇಂದು 11:15 ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.