ಕರ್ನಾಟಕ

karnataka

ETV Bharat / sports

ದುಬೈನಲ್ಲಿ ಆರ್​ಸಿಬಿ ಬಳಗ ಸೇರಿಕೊಂಡ ಎಬಿಡಿ, ಡೇಲ್​ ಸ್ಟೈನ್​, ಮೋರಿಸ್​ - ಡೇಲ್​ ಸ್ಟೈನ್​

ಶುಕ್ರವಾರ ಆರ್​ಸಿಬಿ ತಂಡ ದುಬೈಗೆ ತೆರಳಿತ್ತು. ಇದೀಗ ಅಭಿಮಾನಿಗಳು ಎದುರು ನೋಡುತ್ತಿದ್ದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿ ಸಹಿತ ವೇಗಿ ಸ್ಟೈನ್​ ಹಾಗೂ ಆಲ್​ರೌಂಡರ್​ ಕ್ರಿಸ್​ ಮೋರಿಸ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಐಪಿಎಲ್​ 2020
ಎಬಿ ಡಿ ವಿಲಿಯರ್ಸ್​

By

Published : Aug 22, 2020, 2:51 PM IST

ದುಬೈ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿ ಡಿ ವಿಲಿಯರ್ಸ್​, ಡೇಲ್​ ಸ್ಟೈನ್​ ಹಾಗೂ ಕ್ರಿಸ್​ ಮೋರಿಸ್​ ದುಬೈಗೆ ಬಂದು ಸೇರಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಿದೆ.

ಶುಕ್ರವಾರ ಆರ್​ಸಿಬಿ ತಂಡ ದುಬೈಗೆ ತೆರಳಿತ್ತು. ಇದೀಗ ಅಭಿಮಾನಿಗಳು ಎದುರು ನೋಡುತ್ತಿದ್ದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿ ಸಹಿತ ವೇಗಿ ಸ್ಟೈನ್​ ಹಾಗೂ ಆಲ್​ರೌಂಡರ್​ ಕ್ರಿಸ್​ ಮೋರಿಸ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡದ ಆಟಗಾರರು ಮಾತ್ರ ತಂಡಕ್ಕೆ ಸೇರಬೇಕಾಗಿದೆ. ಆ್ಯರೋನ್​ ಫಿಂಚ್​, ಜೋಶ್​ ಫಿಲಿಪ್ಪೆ ಹಾಗೂ ಮೊಯಿನ್ ಅಲಿ ಇಂಗ್ಲೆಂಡ್​ನಲ್ಲಿ ಸೀಮಿತ ಓವರ್​ಗಳ ಸರಣಿಯ ನಂತರ ದುಬೈಗೆ ಬರಲಿದ್ದಾರೆ.

ನಾನು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಂದಿನ ಪ್ರಯಾಣ ಸಾಮಾನ್ಯಕ್ಕಿಂತ ಭಿನ್ನವಾಗಿತ್ತು. ಆದರೆ ನನ್ನ ದಕ್ಷಿಣ ಆಫ್ರಿಕಾದ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದು ಹಾಗೂ ಆರ್​ಸಿಬಿ ತಂಡಕ್ಕೆ ಸೇರಿಕೊಳ್ಳುವುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ.

ನನ್ನ ಕೋವಿಡ್​-19 ವರದಿಗಾಗಿ ಎದುರು ನೋಡುತ್ತಿದ್ದೇನೆ. ನನ್ನ ಬ್ಯಾಗನ್ನು ತೆಗೆದಿಡಬೇಕಾಗಿದೆ. ಈ ವರ್ಷ ಇಲ್ಲಿರುವುದಕ್ಕೆ ಬೇಸರವಿದೆ. ಇನ್ನು ನಾನು ನಮ್ಮ ತಂಡದ ಹೊಸ ಆಟಗಾರರನ್ನು ಭೇಟಿ ಮಾಡುವುದಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ದೀರ್ಘ ಸಮಯದ ನಂತರ ಕ್ರಿಕೆಟ್​ ಆಡಲಿದ್ದೇವೆ. ಉತ್ಸಾಹದ ಜೊತೆಗೆ ಸ್ವಲ್ಪ ಭಯವೂ ಇದೆ ಎಂದು ಈ ವರ್ಷ ಆರ್​ಸಿಬಿ ಸೇರಿಕೊಂಡಿರುವ ಕ್ರಿಸ್​ ಮೋರಿಸ್ ಹೇಳಿದ್ದಾರೆ.

ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲಿದ್ದಾರೆ. ಈ ವೇಳೆ 2 ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್​​ ವರದಿ ಪಡೆಯಬೇಕಾಗಿದೆ. ನಂತರ ಬಯೋ ಸೆಕ್ಯೂರ್​ ವಲಯಕ್ಕೆ ತೆರಳಿದ ನಂತರ ಪ್ರತೀ 5 ದಿನಗಳಿಗೊಮ್ಮೆ ಕೋವಿಡ್​-19 ಟೆಸ್ಟ್​ಗೆ ಒಳಗಾಗಲಿದ್ದಾರೆ. ಸೆಪ್ಟೆಂಬರ್​ 19ರಿಂದ 13ನೇ ಆವೃತ್ತಿಯ ಐಪಿಎಲ್​ ಆರಂಭವಾಗಲಿದೆ.

ABOUT THE AUTHOR

...view details