ಕರ್ನಾಟಕ

karnataka

ETV Bharat / sports

360 ಆಟ ಮತ್ತೆ ಶುರು... ಟಿ-20 ಬ್ಲಾಸ್ಟ್​ಗೆ ಎಂಟ್ರಿಕೊಟ್ಟ ಪಂದ್ಯದಲ್ಲೇ ಅಬ್ಬರಿಸಿದ ಎಬಿಡಿ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿ ವಿಲಿಯರ್ಸ್​ ಇಂಗ್ಲೆಂಡ್​ನ ಟಿ-20 ಬ್ಲಾಸ್ಟ್​ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ್ದು, ಅಭಿಮಾನಿಗಳಿಗೆ ತಮ್ಮ 360 ಗಮ್ಮತ್ತನ್ನು ತೋರಿಸಿದ್ದಾರೆ.

Ab Day Villiers

By

Published : Jul 20, 2019, 7:34 PM IST

ಲಂಡನ್​: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿ ವಿಲಿಯರ್ಸ್​ ಇಂಗ್ಲೆಂಡ್​ನ ಟಿ-20 ಬ್ಲಾಸ್ಟ್​ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ್ದು, ಅಭಿಮಾನಿಗಳಿಗೆ ತಮ್ಮ 360 ಗಮ್ಮತ್ತನ್ನು ತೋರಿಸಿದ್ದಾರೆ.

ಕಳೆದ ವರ್ಷವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​​​ ನಿವೃತ್ತಿ ಘೋಷಿಸಿದ್ದ ಎಬಿಡಿ ಟಿ-20 ಲೀಗ್​ನಲ್ಲಿ ಇನ್ನಷ್ಟು ವರ್ಷ ಆಡಲು ನಿರ್ಧರಿಸಿದ್ದರು. ಅಂತೆಯೇ ಬಿಪಿಎಲ್​,ಪಿಎಸ್​ಎಲ್​, ಐಪಿಎಲ್​ನಲ್ಲಿ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಸುದೀರ್ಘ ಟಿ-20 ಟೂರ್ನಿಯಾದ ಟಿ-20- ಬ್ಲಾಸ್ಟ್​ನಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ಮಿಡ್ಸ್​ಎಸೆಕ್ಸ್​ ತಂಡದ ಪರ 88 ರನ್​ಗಳಿಸಿ ​ ಮಿಂಚಿದ್ದಾರೆ.

ಕೇವಲ43 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್​ ಸಹಿತ 88 ರನ್​ಗಳಿಸುವ ಮೂಲಕ ತಂಡಕ್ಕೆ 7 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದರು. ಎದುರಾಳಿ ನೀಡಿದ 165 ರನ್​ಗಳ ಗುರಿಯನ್ನು ಏಕಾಂಗಿಯಾಂಗಿ ಹೋರಾಡಿ ಕೇವಲ 17 ಓವರ್​ನಲ್ಲೇ ಗೆಲುವು ತಂದುಕೊಟ್ಟಿದ್ದಾರೆ.

ವಿಶ್ವಕಪ್​ನಲ್ಲಿ ವಿಲಿಯರ್ಸ್​ ಕೊನೆಗಳಿಗೆಯಲ್ಲಿ ಅವಕಾಶಕ್ಕಾಗಿ ಕೇಳಿಕೊಂಡಿದ್ದರು ಎಂಬ ವಿವಾದ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದಕ್ಕೆಲ್ಲಾ ಸ್ಪಷ್ಟನೇ ನೀಡುವ ಮೂಲಕ ಗೊಂದಲದಿಂದ ಹೊರಬಂದಿರುವ ಎಬಿಡಿ ಮತ್ತೆ ಕ್ರಿಕೆಟ್​ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುತ್ತಿದ್ದಾರೆ.

ABOUT THE AUTHOR

...view details