ಕರ್ನಾಟಕ

karnataka

By

Published : Jan 20, 2020, 1:39 PM IST

ETV Bharat / sports

ಟೀಂ ಇಂಡಿಯಾ ಬೌಲರ್​ಗಳ ಅಸಾಧಾರಣ ಪ್ರದರ್ಶನವೇ ನಮ್ಮ ಸೋಲಿಗೆ ಕಾರಣ: ಫಿಂಚ್

ಆಸ್ಟ್ರೇಲಿಯಾ ತಂಡ ಸರಣಿ ಸೋಲಿಗೆ ಟೀಂ ಇಂಡಿಯಾ ಬೌಲರ್​ಗಳು ತೋರಿದ ಅಸಾಧಾರಣ ಪ್ರದರ್ಶನವೇ ಕಾರಣ ಎಂದು ಆಸಿಸ್ ತಂಡದ ನಾಯಕ ಆ್ಯರೋನ್​ ಫಿಂಚ್ ಹೇಳಿದ್ದಾರೆ.

Aaron Finch heaps praise on Indian bowlers,ಟೀಂ ಇಂಡಿಯಾ ಬೌಲರ್​ಗಳನ್ನ ಹೊಗಳಿದ ಆಸೀಸ್ ನಾಯಕ
ಆ್ಯರೋನ್​ ಫಿಂಚ್

ಬೆಂಗಳೂರು:ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಬೌಲರ್​ಗಳು ಕಂಬ್ಯಾಕ್​ ಮಾಡಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉತ್ತಮ ಪ್ರದರ್ಶನ ತೋರಿದ ಭಾರತ ತಂಡದ ಬೌಲರ್​ಗಳನ್ನ ಆಸೀಸ್ ನಾಯಕ ಕೊಂಡಾಡಿದ್ದಾರೆ.

ಭಾರತದ ವಿರುದ್ಧ ಸರಣಿ ಸೋಲಿನ ಬಳಿಕ ಮಾತನಾಡಿದ ಆಸೀಸ್ ನಾಯಕ ಆ್ಯರೋನ್​ ಫಿಂಚ್​, ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ. ಅಸಾಧಾರಣ ಡೆತ್ ಬೌಲಿಂಗ್ ಭಾರತ ತಂಡ ಸರಣಿ ಗೆಲ್ಲಲು ಸಹಕಾರಿಯಾಗಿದೆ ಎಂದಿದ್ದಾರೆ.

ಆ್ಯರೋನ್​ ಫಿಂಚ್, ಆಸ್ಟ್ರೇಲಿಯಾ ತಂಡದ ನಾಯಕ

ನನ್ನ ಪ್ರಕಾರ ಕೊನೆಯ ಓವರ್​ಗಳಲ್ಲಿ ನಮ್ಮ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ್ರು. ಇದೇ ಕಾರಣದಿಂದ ನಾವು ಹಿನ್ನಡೆ ಅನುಭವಿಸಿದೆವು ಎಂದಿದ್ದಾರೆ. ರಾಜ್​ಕೋಟ್​ನಲ್ಲಿ ಕೆ.ಎಲ್.ರಾಹುಲ್ ತೋರಿದ ಅದ್ಭುತ ಪ್ರದರ್ಶನದಿಂದ ನಾವು ಸೋಲಬೇಕಾಯ್ತು. ಅಂತಿಮ ಓವರ್​ಗಳಲ್ಲಿ ರಾಹುಲ್ ಮಿಂಚಿದ್ದರು. ಆದೇ ರೀತಿ ನಾವು ಕೂಡ ಕೆಲವು ಟ್ರಿಕ್ಸ್ ಉಪಯೋಗಿಸಿದ್ದರೆ ತಂಡಕ್ಕೆ ಸಹಕಾರಿಯಾಗುತ್ತಿತ್ತು ಎಂದಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಎಡವಿದ್ದ ಟೀಂ ಇಂಡಿಯಾ ಬೌಲರ್​ಗಳು ದ್ವಿತೀಯ ಮತ್ತು ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ರು. ಮೊಹಮ್ಮದ್ ಶಮಿ, ಬುಮ್ರಾ ಮತ್ತು ನವದೀಪ್ ಸೈನಿ ಯಾರ್ಕರ್​ಗಳ ಮೂಲಕ ಆಸೀಸ್​ ಆಟಗಾರರನ್ನ ಕಾಡಿದ್ರು.

ABOUT THE AUTHOR

...view details