ನವದೆಹಲಿ: ಭಾರತದ ಸ್ಟಾರ್ ಸ್ಪಿನ್ನರ್ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಬೌಲಿಂಗ್ ದಾಳಿಯನ್ನು ಎದುರಿಸುವುದು ಬಹಳ ಕಷ್ಟ ಎಂದು ಆಸೀಸ್ ಸೀಮಿತ ಓವರ್ಗಳ ನಾಯಕ ಆ್ಯರೋನ್ ಫಿಂಚ್ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ಆಭಿಮಾನಿಗಳ ಸವಾಲಿಗೆ ಉತ್ತರಿಸಿದ ಫಿಂಚ್, ಅಭಿಮಾನಿಯೊಬ್ಬರು ಅಶ್ವಿನ್ ಹಾಗೂ ಜಡೇಜಾರಲ್ಲಿ ಯಾರು ಕಠಿಣ ಬೌಲರ್ ಎಂದು ಕೇಳಿದ್ದಕ್ಕೆ ಫಿಂಚ್ ಇಬ್ಬರೂ ಅತ್ಯಂತ ಕಠಿಣ ಬೌಲರ್ ಎಂದಿದ್ದಾರೆ.
ಅಶ್ವಿನ್ ಸ್ಪಿನ್ನಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಹೆಚ್ಚಿನ ತಿರುವು ಬರುವುದರಿಂದ ಅವರನ್ನು ಎದುರಿಸುವುದು ಬಹಳ ಕಷ್ಟ. ಹಾಗೆಯೇ ಜಡೇಜಾ ಅವರ ಬೌಲಿಂಗ್ನಲ್ಲಿ ದಿಫೆನ್ಸ್ ಆಡುವುದು ಯಾವಾಗಲು ಸವಾಲಿನದ್ದಾಗಿದೆ ಎಂದು ಫಿಂಚ್ ತಿಳಿಸಿದ್ದಾರೆ.
ಕೆರಿಯರ್ನಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಫಿಂಚ್, ಶ್ರೀಲಂಕಾದ ಲೆಜೆಂಡ್ ಬೌಲರ್ ಮುತ್ತಯ್ಯ ಮುರುಳೀದರನ್ ಹಾಗೂ ಪಾಕಿಸ್ತಾನದ ಸಾಯಿದ್ ಅಜ್ಮಲ್ ಹೆಸರನ್ನು ಉಲ್ಲೇಖಿಸಿದ್ದಾರೆ.