ಪರ್ತ್:ಟಿ-20 ಶ್ರೇಯಾಂಕದಲ್ಲಿ ನಂಬರ್ ಒನ್ ತಂಡವಾಗಿರುವ ಪಾಕಿಸ್ತಾನವನ್ನು ಆಸ್ಟ್ರೇಲಿಯಾ 2-0ದಿಂದ ಬಗ್ಗುಬಡಿದು ಸರಣಿ ವಶಪಡಿಸಿಕೊಂಡಿದೆ.
2016ರಿಂದ 2018/19ರವರೆಗೆ ಸತತ 11 ಸರಣಿ ಗೆದ್ದು ಬೀಗಿದ್ದ ಪಾಕಿಸ್ತಾನ ಕಳೆದ ಕೆಲವು ತಿಂಗಳಿಂದ ಟಿ-20 ಕ್ರಿಕೆಟ್ನಲ್ಲಿ ಹೀನಾಯ ಪ್ರದರ್ಶನ ತೋರುತ್ತಿದ್ದು, ಸತತ 4ನೇ ಸರಣಿಯಲ್ಲಿ ಸೋಲುಕಂಡಿದೆ.
ಶುಕ್ರವಾರ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ತಾನ 20 ಓವರ್ಗಳಲ್ಲಿ ಕೇವಲ 106 ರನ್ಗಳಿಸಿತು. ಇಫ್ತಿಖರ್ ಅಹ್ಮದ್ 45 ರನ್ ಹಾಗೂ ಇಮಾಮ್ ಉಲ್ ಹಕ್ 14 ರನ್ಗಳಿಸಿದ್ದು ಬಿಟ್ಟರೆ, ಉಳಿದೆಲ್ಲ ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ಔಟಾದರು.