ಕರ್ನಾಟಕ

karnataka

ETV Bharat / sports

ಶ್ರೇಯಸ್, ಚಹಾರ್, ಸೈನಿಯಂತಹ ಯುವ ಆಟಗಾರರಿಗೆ ವಿಂಡೀಸ್​ ಸರಣಿ ಅದ್ಭುತ ಅವಕಾಶ​: ಕೊಹ್ಲಿ - india tour of west indies

ವಿಂಡೀಸ್​ ವಿರುದ್ಧದ ಸರಣಿ ಕೆಲವು ಯುವ ಹಾಗೂ ತಂಡಕ್ಕೆ ಮರಳಿರುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಸಿಕ್ಕಿರುವ ಅದ್ಭುತ ಅವಕಾಶ ಎಂದು ಟೀಂ​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

Kohli

By

Published : Jul 30, 2019, 10:40 AM IST

ಮುಂಬೈ: ಆಗಸ್ಟ್​ 3ರಿಂದ ಆರಂಭವಾಗಲಿರುವ ವಿಂಡೀಸ್​ ವಿರುದ್ಧದ ಸರಣಿ ಕೆಲವು ಯುವ ಹಾಗೂ ತಂಡಕ್ಕೆ ಮರಳಿರುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರುವುದಕ್ಕೆ ಸಿಕ್ಕಿರುವ ಅದ್ಭುತ ಅವಕಾಶ ಎಂದು ಟೀಂ​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ ಬಳಿಕ ಮೊದಲ ದ್ವಿಪಕ್ಷೀಯ ಸರಣಿ ಕೈಗೆತ್ತಿಕೊಂಡಿರುವ ಭಾರತ ತಂಡದಲ್ಲಿ ಯುವ ಕ್ರಿಕೆಟಿಗರಾದ ರಾಹುಲ್​ ಚಹಾರ್​, ದೀಪಕ್​ ಚಹಾರ್​, ನವ್ದೀಪ್​ ಸೈನಿ, ಖಲೀಲ್​ ಅಹ್ಮದ್,​ ವಾಷಿಂಗ್ಟನ್​ ಸುಂದರ್​ ಹಾಗೂ ಸೀಮಿತ ಓವರ್​ಗಳ ಪಂದ್ಯಕ್ಕೆ ಮರಳಿರುವ ಕನ್ನಡಿಗ ಮನೀಷ್​ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವಕಾಶ ಗಟ್ಟಿಸಿಕೊಂಡಿದ್ದಾರೆ. ಇವರಿಗೆ ತಮ್ಮ ಕೌಶಲ್ಯ ಪ್ರದರ್ಶನ ಮಾಡಲು ಈ ಸರಣಿ ಉತ್ತಮ ಅವಕಾಶವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಶ್ರೇಯಸ್​ ಅಯ್ಯರ್, ಚಹಾರ್​ ಬ್ರದರ್ಸ್​ ಹಾಗೂ ಮನೀಷ್​ ಪಾಂಡೆ

ನಮ್ಮ ಟೆಸ್ಟ್​ ತಂಡ ಅತ್ಯುತ್ತಮವಾಗಿದೆ. ಆಟಗಾರರ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಆದರೆ ನನ್ನ ಪ್ರಕಾರ ಮೂರು ಟಿ-20 ಪಂದ್ಯಗಳೇ ರೋಚಕವೆನಿಸಿವೆ. ಏಕೆಂದರೆ ಟಿ-20 ತಂಡದಲ್ಲಿ ಯುವ ಆಟಗಾರರು ತಂಡ ಸೇರಿಕೊಂಡಿರುವುದರಿಂದ ಅವರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಸೀಮಿತ ಓವರ್​ಗಳ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಯುವ ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒತ್ತಡದ ಸನ್ನಿವೇಶಸದಲ್ಲಿ ಹೇಗೆ ಆಡಬೇಕೆಂಬುದನ್ನು ದೇಶಿಯ ಕ್ರಿಕೆಟ್​ನಲ್ಲಿ ತಮ್ಮ ಪ್ರದರ್ಶನದ ಮೂಲಕ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ನಮ್ಮ ತಂಡ ಉತ್ತಮವಾಗಿದೆ ಎಂದು ಕೊಹ್ಲಿ ಹೊಸಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವ್ದೀಪ್​ ಸೈನಿ

ಆಗಸ್ಟ್​ 3ರಿಂದ ವಿಂಡೀಸ್​ ವಿರುದ್ಧ ಟಿ-20 ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಕೊಹ್ಲಿ ಪಡೆ 3 ಟಿ-20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್​ ಪಂದ್ಯವನ್ನಾಡಲಿದೆ. ಟಿ-20 ಆಗಸ್ಟ್​ 3, 4 ಮತ್ತು 6 ರಂದು ನಡೆಯಲಿದೆ. ಏಕದಿನ ಪಂದ್ಯ ಅಗಸ್ಟ್ 8, 11 ಹಾಗೂ 14 ರಂದು ನಡೆದರೆ, ಆಗಸ್ಟ್​ 22ರಿಂದ 26ರವರೆಗೆ ಮೊದಲ ಟೆಸ್ಟ್​, ಆಗಸ್ಟ್​ 30ರಿಂದ ಸೆಪ್ಟೆಂಬರ್​ 3ರವರೆಗೆ ಎರಡನೇ ಟೆಸ್ಟ್​ ನಡೆಯಲಿದೆ.

ABOUT THE AUTHOR

...view details