ಕರ್ನಾಟಕ

karnataka

ETV Bharat / sports

ಆ್ಯಶಸ್​ ಸರಣಿಯ 10 ಇನ್ನಿಂಗ್ಸ್​ಗಳಲ್ಲಿ 7 ಬಾರಿ ಒಬ್ಬ ಬೌಲರ್​ಗೆ ವಿಕೆಟ್​ ಒಪ್ಪಿಸಿದ ಡೇವಿಡ್​ ವಾರ್ನರ್​! - ಸ್ಟುವರ್ಟ್​ ಬ್ರಾಡ್​

2019ರ ವಿಶ್ವಕಪ್​ನಲ್ಲಿ 3 ಶತಕದ ಸಹಿತ 647 ರನ್​ಗಳಿಸುವ ಮೂಲಕ ಟೂರ್ನಿಯಲ್ಲಿ ಕೇವಲ ಒಂದು ರನ್ನಿಂದ ಎರಡನೇ ಸ್ಥಾನ ಅಲಂಕರಿಸಿದ್ದರು. ಆದರೆ ಆ್ಯಶಸ್​ ಸರಣಿಯಲ್ಲಿ ಮಾತ್ರ 5 ಟೆಸ್ಟ್​ ಪಂದ್ಯಗಳಲ್ಲಿ 9.5 ರ ಸರಾಸರಿಯಲ್ಲಿ 95 ರನ್​ಗಳಿಸಿದ್ದಾರೆ. ಇಡೀ ಸರಣಿಯಲ್ಲಿ ಗಳಿಸಿದ್ದು ಏಕೈಕ ಅರ್ಧಶತಕ ಮಾತ್ರ.

Stuart Broad gets David Warner

By

Published : Sep 16, 2019, 6:18 PM IST

ಲಂಡನ್​: ಪ್ರತಿಷ್ಠಿತ ಆ್ಯಶಸ್​ ಸರಣಿ 2-2 ರಲ್ಲಿ ಮುಕ್ತಾಯಗೊಂಡಿದ್ದು ಆಸ್ಟ್ರೇಲಿಯಾದ ಓಪನರ್​ ಡೇವಿಡ್​ ವಾರ್ನರ್ ಸರಣಿಯಲ್ಲಿ 10 ಇನ್ನಿಂಗ್ಸ್​ ಬ್ಯಾಟಿಂಗ್​ ನಡೆಸಿದ್ದು 7 ಬಾರಿ ಸ್ಟುವರ್ಟ್​ ಬ್ರಾಡ್​ಗೆ ವಿಕೆಟ್​ ಒಪ್ಪಿಸಿ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ.

2019ರ ವಿಶ್ವಕಪ್​ನಲ್ಲಿ 3 ಶತಕದ ಸಹಿತ 647 ರನ್​ಗಳಿಸುವ ಮೂಲಕ ಟೂರ್ನಿಯಲ್ಲಿ ಕೇವಲ ಒಂದು ರನ್ನಿಂದ ಎರಡನೇ ಸ್ಥಾನ ಅಲಂಕರಿಸಿದ್ದರು. ಆದರೆ ಆ್ಯಶಸ್​ ಸರಣಿಯಲ್ಲಿ ಮಾತ್ರ 5 ಟೆಸ್ಟ್​ ಪಂದ್ಯಗಳಲ್ಲಿ 9.5 ರ ಸರಾಸರಿಯಲ್ಲಿ 95 ರನ್​ಗಳಿಸಿದ್ದಾರೆ. ಇಡೀ ಸರಣಿಯಲ್ಲಿ ಗಳಿಸಿದ್ದು ಏಕೈಕ ಅರ್ಧಶತಕ ಮಾತ್ರ.

ಇಂಗ್ಲೆಂಡ್​ನ ವೇಗಿ ಸ್ಟುವರ್ಡ್​ ಬ್ರಾಡ್​ ಇಡೀ ಸರಣಿಯಲ್ಲಿ ವಾರ್ನರ್​ ಪಾಲಿಗೆ ಕಬ್ಬಿಣದ ಕಡಲೆಯಾದರು. ಸತತ ಮೂರು ಬಾರಿ ಡಕ್​ ಔಟ್​ ಸೇರಿದಂತೆ 7 ಬಾರಿ ವಾರ್ನರ್​ರನ್ನು ವೇಗಿ​ ಬ್ರಾಡ್​ ಔಟ್​ ಮಾಡುವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.

ಟಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 5 ಬಾರಿ ಮಾತ್ರ ಒಬ್ಬ ಬ್ಯಾಟ್ಸ್​ಮನ್​ 7 ಬಾರಿ ಒಬ್ಬನೇ ಬೌಲರ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕಳೆದ ಬಾರಿ ಈ ದಾಖಲೆ ಆಸ್ಟ್ರೇಲಿಯಾದ ನಥನ್ ಲಿಯಾನ್​ ಮಾಡಿದ್ದರು. ಇವರು ಇಂಗ್ಲೆಂಡ್​ನ ಮೊಯಿನ್​ ಅಲಿಯನ್ನು 7 ಬಾರಿ ಔಟ್​ ಮಾಡಿದ್ದರು.

ಇಂಗ್ಲೆಂಡ್​ನ 10ನೇ ಬ್ಯಾಟ್ಸ್​ಮನ್​ಗಿಂತಲೂ ಕಳಪೆ ಸರಾಸರಿ

95 ರನ್​ಗಳಿಸುವ ಮೂಲಕ ವಾರ್ನರ್​ ಇಂಗ್ಲೆಂಡ್​ನ 10ನೇ ಬ್ಯಾಟ್ಸ್​ಮನ್​ ಜಾಕ್​ ಲೀಚ್​ಗಿಂತಲೂ ಕಳಪೆ ಸರಾಸರಿ ಬ್ಯಾಟಿಂಗ್​ ನಡೆಸಿದ ಬೇಡದ ದಾಖಲೆಗೆ ಪಾತ್ರರಾದರು. ಇದಲ್ಲದೆ ಇಡೀ ಸರಣಿಯಲ್ಲಿ ಎರಡು ಬಾರಿ ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದಾರೆ. ವಾರ್ನರ್​ 3 ಡಕ್​ ಔಟ್​ ಸೇರಿದಂತೆ 8 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ.
​ ​
113 ವರ್ಷದ ಕಳಪೆ ದಾಖಲೆ ಮುರಿದ ಓಪನರ್ಸ್​

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಆರಂಭಿಕರು ಇಡೀ ಸರಣಿಯಲ್ಲಿ 12.55 ರ ಕಳಪೆ ಸರಾಸರಿಯಲ್ಲಿ ಬ್ಯಾಟಿಂಗ್​ ನಡೆಸುವ ಮೂಲಕ 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದರು. ಈ ಹಿಂದೆ 1906 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಆರಂಭಿಕರು 14.16 ಸರಾಸರಿಯಲ್ಲಿ ರನ್​ಗಳಿಸಿ ಕಳಪೆ ದಾಖಲೆ ಬರೆದಿದ್ದರು.

ABOUT THE AUTHOR

...view details