ಮೆಲ್ಬೋರ್ನ್:ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ಸೇರಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೈನ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಬಿಗ್ಬ್ಯಾಶ್ನಲ್ಲಿ ಕಣಕ್ಕಿಳಿದಿದ್ದಾರೆ.
6,6,4,4 ಬಾರಿಸಿದ್ರೂ ತಾಳ್ಮೆ ಕಳೆದುಕೊಳ್ಳದೇ ಡೇಲ್ ಸ್ಟೈನ್ ವಿಕೆಟ್ ಪಡೆದಿದ್ದು ಹೀಗೆ...ವಿಡಿಯೋ - ಮೆಲ್ಬೋರ್ನ್ ಸ್ಟಾರ್ಸ್
ಬಿಗ್ಬ್ಯಾಶ್ ಪದಾರ್ಪಣೆ ಪಂದ್ಯದಲ್ಲೇ ಮಾರಕ ವೇಗಿ ಡೇಲ್ ಸ್ಟೈನ್ ಎಸೆದ ಮೊದಲ ಓವರ್ನಲ್ಲೇ ಎದುರಾಳಿ ತಂಡದ ಬ್ಯಾಟ್ಸ್ಮನ್ ಸಿಕ್ಸರ್, ಬೌಂಡರಿಗಳ ಮೂಲಕ ಅಬ್ಬರಿಸಿದ್ರೂ ತಾಳ್ಮೆ ಕಳೆದುಕೊಳ್ಳದೆ ವಿಕೆಟ್ ಕಬಳಿಸಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಮೆಲ್ಬೋರ್ನ್ ಸ್ಟಾರ್ಸ್ ಪರ ಬಿಗ್ಬ್ಯಾಶ್ ಲೀಗ್ ಪಂದ್ಯದಲ್ಲಿ ಇಂದು ಪದಾರ್ಪಣೆ ಮಾಡಿರುವ ವೇಗಿ, ತಾವು ಎಸೆದ ಪಂದ್ಯದ ಎರಡನೇ ಓವರ್ನಲ್ಲೇ ತಾಳ್ಮೆ ಕಳೆದುಕೊಳ್ಳದೇ ವಿಕೆಟ್ ಪಡೆದು ಮಿಂಚಿದ್ರು.
ಅಡಿಲೇಡ್ ಸ್ಟ್ರೈಕರ್ಸ್ ತಂಡದ ಆರಂಭಿಕ ಆಟಗಾರ ಜಾಕ್ ವೀಥರಾಲ್ಡ್ ಇವರ ಓವರ್ನ ಮೊದಲ ನಾಲ್ಕು ಎಸೆತ 6,6,4,4 ಹೊಡೆದಿದ್ದಾರೆ. ಇಷ್ಟಾದರೂ ತಾಳ್ಮೆಯಿಂದ ನಂತರದ ಎಸೆತವನ್ನು ಸ್ವಲ್ಪ ವಿಭಿನ್ನವಾಗಿ ಎಸೆದರು. ಆದ್ರೆ ಈ ವೇಳೆಯೂ ದೊಡ್ಡ ಹೊಡೆತಕ್ಕೆ ಮುಂದಾದ ಬ್ಯಾಟ್ಸ್ಮನ್ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
36 ವರ್ಷದ ಡೇಲ್ ಸ್ಟೈನ್ 209 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 246 ವಿಕೆಟ್ ಪಡೆದಿದ್ದಾರೆ. 9 ರನ್ ನೀಡಿ 4 ವಿಕೆಟ್ ಪಡೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.