ಕರ್ನಾಟಕ

karnataka

ETV Bharat / sports

ಬೇಡದ ದಾಖಲೆಯಲ್ಲೂ ಕೂಲ್ ಧೋನಿ ಸರಿಗಟ್ಟಿದ ಕಿಂಗ್‌ ಕೊಹ್ಲಿ

2015-16ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಮತ್ತು ಆಸ್ಟ್ರೇಲಿಯಾ ವಿರುದ್ಧ 4, ಒಂದಾದ ಮೇಲೆ ಒಂದರಂತೆ ಒಟ್ಟು ಐದು ಏಕದಿನ ಪಂದ್ಯಗಳನ್ನು ಕಳೆದುಕೊಂಡಿತ್ತು. ಇದೀಗ ವಿರಾಟ್ ನಾಯಕತ್ವದಲ್ಲೂ ಸತತ ಐದು ಪಂದ್ಯ ಸೋತಂತಾಗಿದೆ..

Virat Kohli records worst streak as ODI captain
ದಾಖಲೆಯಲ್ಲಿ ದೋನಿ ಸರಿಗಟ್ಟಿದ ವಿರಾಟ್

By

Published : Nov 29, 2020, 6:27 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 51 ರನ್​ಗಳಿಂದ ಸೋತಿದೆ. ಇದರಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸತತ 5 ಏಕದಿ ಪಂದ್ಯ ಕೈಚೆಲ್ಲಿದಂತಾಗಿದೆ.

ಭಾರತ, ಆಸೀಸ್​ ವಿರುದ್ಧದ 2 ಏಕದಿನ ಪಂದ್ಯಗಳಲ್ಲಿ ಸೋಲುಂಡಿದ್ದು, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ ನಾಯಕನಾಗಿ ಅನಗತ್ಯ ದಾಖಲೆಗೆ ಸಾಕ್ಷಿಯಾಗಿದ್ದಾರೆ. ವಿರಾಟ್ ನೇತೃತ್ವದಲ್ಲಿ ಭಾರತ ಐದು ಬ್ಯಾಕ್ ಟು ಬ್ಯಾಕ್ ಏಕದಿನ ಪಂದ್ಯಗಳನ್ನು ಕಳೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೂರೂ ಪಂದ್ಯಗಳಲ್ಲೂ ಸೋಲು ಕಂಡಿತ್ತು.

2015-16ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಮತ್ತು ಆಸ್ಟ್ರೇಲಿಯಾ ವಿರುದ್ಧ 4, ಒಂದಾದ ಮೇಲೆ ಒಂದರಂತೆ ಒಟ್ಟು ಐದು ಏಕದಿನ ಪಂದ್ಯಗಳನ್ನು ಕಳೆದುಕೊಂಡಿತ್ತು. ಇದೀಗ ವಿರಾಟ್ ನಾಯಕತ್ವದಲ್ಲೂ ಸತತ ಐದು ಪಂದ್ಯ ಸೋತಂತಾಗಿದೆ. ಅನಗತ್ಯ ದಾಖಲೆಯಲ್ಲೂ ವಿರಾಟ್, ಎಂಎಸ್ ಧೋನಿಯನ್ನು ಸರಿಗಟ್ಟಿದ್ದಾರೆ.

ABOUT THE AUTHOR

...view details