ಕರ್ನಾಟಕ

karnataka

ETV Bharat / sports

ಬ್ರಿಸ್ಬೇನ್​ನಲ್ಲಿನ ಕಠಿಣ ಕ್ವಾರಂಟೈನ್ ಸಡಿಲಿಸಲು ಸಿಎಗೆ ಪತ್ರ ಬರೆದ ಬಿಸಿಸಿಐ - BCCI formally writes to CA on relaxation of Brisbane hard quarantine

ಈ ಹಿಂದೆ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್​ ಮಾಡಿದ್ದ ವೇಳೆ ಪ್ರತಿ ಫ್ಲೋರ್​ಗೂ ಒಬ್ಬ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿತ್ತು. ಹಾಗಾಗಿ ಬಯೋಬಬಲ್ ಪ್ರೋಟೋಕಾಲ್​ಗಳನ್ನು ಯಾರು ಉಲ್ಲಂಘಿಸಲು ಸಾಧ್ಯವಾಗಿರಲಿಲ್ಲ. ಅದರೆ ಮತ್ತೆ ಅದೇ ರೀತಿಯ ಬಯೋಬಬಲ್​ ವ್ಯವಸ್ಥೇ ತುಂಬಾ ಕಠಿಣವಾಗಲಿದೆ ಎಂದು ಬಿಸಿಸಿಐ ಅಧಿಕಾರಿಗಳ ಕೋರಿಕೆಯಾಗಿದೆ.

ಭಾರತ ಆಸ್ಟ್ರೇಲಿಯಾ ಟೆಸ್ಟ್​
ಭಾರತ ಆಸ್ಟ್ರೇಲಿಯಾ ಟೆಸ್ಟ್​

By

Published : Jan 7, 2021, 8:40 PM IST

​ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ಗೂ ಮುನ್ನ ಬ್ರಿಸ್ಬೇನ್​ನಲ್ಲಿನ ಕಟ್ಟುನಿಟ್ಟಾದ ಕ್ವಾರಂಟೈನ್​ ನಿಯಮವನ್ನು ಸಿಡಿಸಿಬೇಕೆಂದು ಮನವಿ ಮಾಡಿ ಬಿಸಿಸಿಐ ಕ್ರಿಕೆಟ್​ ಆಸ್ಟ್ರೇಲಿಯಾ ಔಪಚಾರಿಕ ಪತ್ರ ಬರೆದಿದೆ.

ಪ್ರವಾಸದ ವಿಧಾನಗಳನ್ನು ಕುರಿತು ಎರಡು ಮಂಡಳಿಗಳು ಸಹಿ ಮಾಡಿರುವ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ಬಿಸಿಸಿಐನ ಉನ್ನತ ಕಾರ್ಯನಿರ್ವಾಹಕರು ಸಿಎ ಮುಖ್ಯಸ್ಥ ಅರ್ಲ್ ಎಡ್ಡಿಂಗ್ಸ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಪತ್ರದಲ್ಲಿ ಪ್ರತ್ಯೇಕ ಪಂದ್ಯಗಳಿಗೆ ಪ್ರತ್ಯೇಕ ನಗರ ಪ್ರವಾಸ ಕೈಗೊಳ್ಳುವ ವೇಳೆ ಕಠಿಣ ಕ್ವಾರಂಟೈನ್​ ಆಗಬೇಕೆಂದು ತಿಳಿಸಿಲ್ಲ ಎಂಬುದನ್ನು ಬಿಸಿಸಿಐ ಒತ್ತಿ ಹೇಳಿದೆ.

ಈ ಪತ್ರದಲ್ಲಿ ಆಟಗಾರರು ಒಟ್ಟಿಗೆ ಹೋಟೆಲ್​ನಲ್ಲಿ ಸೇರಲು, ಒಟ್ಟಿಗೆ ಊಟ ಮಾಡಲು ಐಪಿಎಲ್​ನಲ್ಲಿ ಇದ್ದಂತೆ ಇರಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐ ಕೇಳಿಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಕ್ರಿಕೆಟ್​ ಮಂಡಳಿಗಳ ನಡುವೆ ಈ ಕುರಿತು ಚರ್ಚೆ ನಡೆಯುತ್ತಿದೆ. ಆದರೂ ನಾವು ಔಪಚಾರಿಕವಾಗಿ ಕ್ರಿಕೆಟ್​ ಆಸ್ಟ್ರೇಲಿಯಾಗೆ ಪತ್ರ ಬರೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್​ ಮಾಡಿದ್ದ ವೇಳೆ ಪ್ರತಿ ಫ್ಲೋರ್​ಗೂ ಒಬ್ಬ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿತ್ತು. ಹಾಗಾಗಿ ಬಯೋಬಬಲ್ ಪ್ರೋಟೋಕಾಲ್​ಗಳನ್ನು ಯಾರು ಉಲ್ಲಂಘಿಸಲು ಸಾಧ್ಯವಾಗಿರಲಿಲ್ಲ. ಅದರೆ ಮತ್ತೆ ಅದೇ ರೀತಿಯ ಬಯೋಬಬಲ್​ ವ್ಯವಸ್ಥೇ ತುಂಬಾ ಕಠಿಣವಾಗಲಿದೆ ಎಂದು ಬಿಸಿಸಿಐ ಅಧಿಕಾರಿಗಳ ಕೋರಿಕೆಯಾಗಿದೆ.

ಇದನ್ನು ಓದಿ:ಅಶ್ವಿನ್​ರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಲು ಎದುರು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್​

ABOUT THE AUTHOR

...view details