ಅಹ್ಮದಾಬಾದ್ :ಮುಂಬೈ ಇಂಡಿಯನ್ಸ್ ತಂಡದಲ್ಲಿ ಸತತ 2-3 ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದ ಸೂರ್ಯ ಕುಮಾರ್ ಯಾದವ್ ಮತ್ತು ಅವರ ಸಹ ಆಟಗಾರ ಇಶಾನ್ ಕಿಶನ್ ಇಂದು ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಯುಎಇನಲ್ಲಿ ನಡೆದಿದ್ದ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಈ ಜೋಡಿ ಮುಂಬೈ ಇಂಡಿಯನ್ಸ್ಗೆ ದಾಖಲೆಯ 5ನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಅವರ ಈ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಇಶಾನ್ ಕಿಶನ್ ಮುಂಬೈ ಪರ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು 14 ಪಂದ್ಯಗಳಿಂದ 57.33ರ ಸರಾಸರಿಯಲ್ಲಿ 516 ರನ್ಗಳಿಸಿ ಮುಂಬೈ ಪರ ಗರಿಷ್ಠ ಸ್ಕೋರರ್ ಆಗಿದ್ದರು.