ಕರ್ನಾಟಕ

karnataka

ETV Bharat / sports

ಮಿಂಚಿದ ರಶೀದ್​,ಬೈರ್ಸ್ಟೋವ್: ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಇಂಗ್ಲೆಂಡ್​ - ಆದಿಲ್​ ರಶೀದ್​

ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ನ ಮೊದಲ ಸರಣಿಯ ಮೊದಲ ಪಂದ್ಯ ಗೆದ್ದುಕೊಂಡಿದ್ದ ಇಂಗ್ಲೆಂಡ್​ ಸತತ ಎರಡನೇ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಮೊದಲ ಸರಣಿ ಗೆದ್ದ ತಂಡ ಎನಿಸಿಕೊಂಡಿತು.

ಇಂಗ್ಲೆಂಡ್​ ಐರ್ಲೆಂಡ್​ ಏಕದಿನ ಸರಣಿ
ಇಂಗ್ಲೆಂಡ್​ ಐರ್ಲೆಂಡ್​ ಏಕದಿನ ಸರಣಿ

By

Published : Aug 2, 2020, 12:26 PM IST

ಸೌತಾಂಪ್ಟನ್​: ಜಾನಿ ಬೈರ್ಸ್ಟೋವ್​ ಅವರ ಸ್ಫೋಟಕ ಬ್ಯಾಟಿಂಗ್​ ಹಾಗೂ ಆದಿಲ್​ ರಶೀದ್​ ಅವರ ಸ್ಪಿನ್​ ಮೋಡಿಯ ನೆರವಿನಿಂದ ಇಂಗ್ಲೆಂಡ್​ ಇನ್ನು ಒಂದು ಪಂದ್ಯವಿರುವಂತೆ ಏಕದಿನ ಸರಣಿ ಗೆದ್ದುಕೊಂಡಿದೆ.

ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ನ ಮೊದಲ ಸರಣಿಯ ಮೊದಲ ಪಂದ್ಯ ಗೆದ್ದುಕೊಂಡಿದ್ದ ಇಂಗ್ಲೆಂಡ್​ ಸತತ ಎರಡನೇ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಮೊದಲ ಸರಣಿ ಗೆದ್ದ ತಂಡ ಎನಿಸಿಕೊಂಡಿತು.

ಎರಡನೇ ಪಂದ್ಯದಲ್ಲಿ ಟಾಸ್​ಗೆದ್ದ ಐರ್ಲೆಂಡ್​ ಮೊದಲು ಬ್ಯಾಟಿಂಗ್​ ನಡೆಸಿ212 ರನ್​ಗಳಿಸಿತು. ಏಕದಿನ ಕ್ರಿಕೆಟ್​ನಲ್ಲಿ ಕೇವಲ 2ನೇ ಪಂದ್ಯವನ್ನಾಡಿದ ಕರ್ಟಿಸ್​ ಕ್ಯಾಂಫರ್​ ಹೊರೆತುಪಡಿಸಿ ಬೇರೆ ಯಾವ ಬ್ಯಾಟ್ಸ್​ಮನ್​ ಇಂಗ್ಲೆಂಡ್​ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು. ಕ್ಯಾಂಫರ್​ 87 ಎಸೆತಗಳಲ್ಲಿ 8 ಬೌಂಡರಿ ಸಹಿತ ಸತತ ಎರಡನೇ ಅರ್ಧಶತಕ ಬಾರಿಸಿದರು. ಸಿಮಿ ಸಿಂಗ್​ 25, ಹ್ಯಾರಿ ಟೆಕ್ಟರ್​ 28, ಲಾರ್ಕನ್​ ಟಕ್ಕರ್​ 21 ಹಾಗೂ ಆ್ಯಂಡಿ ಮೆಕ್​ಬ್ರೈನ್​ 24 ರನ್​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು.

ಇಂಗ್ಲೆಂಡ್​ ಪರ ಡೇವಿಡ್​​ ವಿಲ್ಲಿ 2 ವಿಕೆಟ್​, ಆದಿಲ್​ ರಶೀದ್​ 3, ಸಾದಿಕ್​ ಮಹ್ಮೂದ್​ 2 ಹಾಗೂ ಆರ್​ ಟಾಪ್ಲೆ ಒಂದು ವಿಕೆಟ್​ ಪಡೆದು ಮಿಂಚಿದರು.

213 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಆರಂಭದಲ್ಲೇ ಜೇಸನ್​ ರಾಯ್​(0) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಬಂದ ಜೇಮ್ಸ್​ ವಿನ್ಸ್​ 16 ಹಾಗೂ ಟಾಮ್​ ಬಾಂಟನ್​ 15ರನ್​​ಗೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು. ಸ್ಫೋಟಕ ಬ್ಯಾಟಿಂಗ್​ ನಡೆಸಿದ ಜಾನಿ ಬೈರ್ಸ್ಟೋವ್​ ಕೇವಲ 41 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್​ ನೆರವನಿಂದ 82 ರನ್​ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು.

131 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್ ಓವರ್​ಗಳ ಅಂತರದಲ್ಲಿ 6 ರನ್​ಗಳಿಸುವಷ್ಟರಲ್ಲಿ ಬೈರ್ಸ್ಟೋವ್​(82), ಇಯಾನ್ ಮಾರ್ಗನ್​ ಹಾಗೂ ಮೊಯಿನ್ ಅಲಿ ವಿಕೆಟ್​ ಕಳೆದುಕೊಂಡಿತು. ಈ 3 ವಿಕೆಟ್​ಗಳು ಜೋಶುವಾ ಲಿಟಲ್​ ಪಾಲಾದವು.

137ಕ್ಕೆ 6 ವಿಕೆಟ್​ ಕಳೇದುಕೊಂಡಿದ್ದ ಸಂದರ್ಭದಲ್ಲಿ ಹೊಂದಾದ ಸ್ಯಾಮ್​ ಬಿಲ್ಲಿಂಗ್ಸ್(46)​ ಹಾಗೂ ಡೇವಿಡ್ ವಿಲ್ಲಿ(47)​ 7ನೇ ವಿಕೆಟ್​ ಗೆ ಮುರಿಯದ 79 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.

ಇಂಗ್ಲೆಂಡ್​ ಪರ ಜೋಶುವಾ ಲಿಟಲ್​ 3, ಕರ್ಟಿಸ್ ಕ್ಯಾಂಫರ್​ 2 ಹಾಗೂ ಕ್ರೈಗ್​ ಯಂಗ್ ಒಂದು ವಿಕೆಟ್​ ಪಡೆದರು.

ABOUT THE AUTHOR

...view details