ನವದೆಹಲಿ:ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ ಹಿಂದೆಂದಿಗಿಂತಲೂ ಕುಸಿತ ಕಂಡಿದ್ದು, ಇದು ಭಾನುವಾರ ನಡೆದ ಭಾರತ - ಬಾಂಗ್ಲಾದೇಶ ನಡುವಿನ ಟಿ-20 ಪಂದ್ಯದ ಮೇಲೂ ಪರಿಣಾಮ ಬೀರಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ - ಬಾಂಗ್ಲಾ ನಡುವಿನ ಚುಟುಕು ಪಂದ್ಯದಲ್ಲಿ ಕೆಟ್ಟ ವಾತಾವರಣದ ಪರಿಣಾಮ ಪ್ರವಾಸಿ ತಂಡದ ಇಬ್ಬರು ಆಟಗಾರರು ವಾಂತಿ ಮಾಡಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಆರಂಭಿಕ ಆಟಗಾರ ಸೌಮ್ಯ ಸರ್ಕಾರ್ ಸೇರಿ ಇಬ್ಬರು ಆಟಗಾರರು ಪಂದ್ಯದ ವೇಳೆ ಮೈದಾನದಲ್ಲಿ ವಾಂತಿ ಮಾಡಿದ್ದರು. ಕೆಟ್ಟ ಗಾಳಿಯ ಪರಿಣಾಮ ಪಂದ್ಯದ ಆಯೋಜನೆ ಬಗ್ಗೆ ಅನುಮಾನ ಮೂಡಿತ್ತು. ಆದರೂ ಬಿಸಿಸಿಐ ಪಂದ್ಯವನ್ನು ಸ್ಥಳಾಂತರ ಮಾಡಲಿಲ್ಲ.
ದೆಹಲಿಯಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ನೀಡಿದ 149 ರನ್ಗಳ ಗುರಿಯನ್ನು ಬಾಂಗ್ಲಾ 7 ವಿಕೆಟ್ಗಳಿಂದ ಗೆಲುವು ದಾಖಲಿಸಿತ್ತು.