ಸೂರತ್(ಗುಜರಾತ್) :ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹಿಳೆಯರ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು 11 ರನ್ಗಳ ರೋಚಕ ಗೆಲುವು ಸಾಧಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಹರ್ಮನ್ಪ್ರೀತ್ ಕೌರ್ ಬಳಗ ನಿಗದಿತ 20 ಓವರ್ನಲ್ಲಿ ಸ್ಪರ್ಧಾತ್ಮಕ 130 ರನ್ ಕಲೆಹಾಕಿತ್ತು.
ಭಾರತದ ಪರ ಹರ್ಮನ್ಪ್ರೀತ್ 43 ಹಾಗೂ ಸ್ಮೃತಿ ಮಂಧಾನ 21 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.
ಬಿಗುದಾಳಿ ನಡೆಸಿದ ಪ್ರವಾಸಿ ತಂಡದ ಪರ ಶಬ್ಮಿಮ್ ಇಸ್ಮೈಲ್ 3 ಹಾಗೂ ನಾಡಿನ್ ಡಿ ಕ್ಲರ್ಕ್ 2 ವಿಕೆಟ್ ಕಿತ್ತರು.
ಸುಲಭ ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ದೀಪ್ತಿ ಶರ್ಮಾ ಶಾಕ್ ನೀಡಿದರು. ದಕ್ಷಿಣ ಆಫ್ರಿಕಾ ಪರ ಮಿಗ್ನೊಗ್ ಡು ಪ್ರೆಜ್ 59 ಬಾರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇನ್ನು ಒಂದು ಎಸೆತ ಬಾಕಿ ಇರುವಂತೆ ದಕ್ಷಿಣ ಆಫ್ರಿಕಾ 119 ರನ್ನಿಗೆ ಸರ್ವಪತನವಾಯಿತು.
ಆತಿಥೇಯರ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ದೀಪ್ತಿ ಶರ್ಮಾ 4 ಓವರ್ ಕೋಟಾದಲ್ಲಿ 3 ಮೇಡಿನ್ 8 ರನ್ ನೀಡಿ 3 ವಿಕೆಟ್ ಕಿತ್ತರು. ರಾಧಾ ಯಾದವ್ ಹಾಗೂ ಶಿಖಾ ಪಾಂಡೆ ತಲಾ 2 ವಿಕೆಟ್ ಹಂಚಿಕೊಂಡರು.